ADVERTISEMENT

ಗುರುವಾರ 16–11–1967

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 19:30 IST
Last Updated 15 ನವೆಂಬರ್ 2017, 19:30 IST

ಮುಗಿದ ಕಥೆ

ನವದೆಹಲಿ, ನ. 15– ಚೀನೀ ಆಕ್ರಮಣದ ಹಿನ್ನೆಲೆಯಲ್ಲಿ ಮಾಜಿ ಲೆಫ್ಟಿನೆಂಟ್ ಜನರಲ್ ಬಿ.ಎಂ. ಕೌಲ್‌ರವರು ಬರೆದ ‘ಅನ್‌ಟೋಲ್ಡ್ ಸ್ಟೋರಿ’ (ಹೇಳದ ಕಥೆ) ಪುಸ್ತಕದ ಪರಿಶೀಲನೆಯನ್ನು ಕೇಂದ್ರ ಸರ್ಕಾರ ಮಾಡಿದ್ದು, ಈ ಪುಸ್ತಕದ ಸಂಬಂಧದಲ್ಲಿ ಕೌಲ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದು ಅನಗತ್ಯವೆಂಬ ನಿರ್ಧಾರಕ್ಕೆ ಬರಲಾಗಿದೆ. ಈ ವಿಚಾರವನ್ನು ಇಂದು ಲೋಕಸಭೆಯಲ್ಲಿ ತಿಳಿಸಲಾಯಿತು.

ಧರ್ಮವೀರರಿಗೆ ಪೂರ್ಣ ಸ್ವಾತಂತ್ರ್ಯ

ADVERTISEMENT

(ನಾರಾಯಣಸ್ವಾಮಿ ಅವರಿಂದ)

ನವದೆಹಲಿ, ನ. 15– ಪಶ್ಚಿಮ ಬಂಗಾಳದಲ್ಲಿನ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸುವುದಕ್ಕೆ ತಮಗೆ ಸೂಕ್ತವೆನಿಸಿದ ರೀತಿಯಲ್ಲಿ ವರ್ತಿಸಲು ಆ ರಾಜ್ಯದ ರಾಜ್ಯಪಾಲ ಧರ್ಮವೀರ ಅವರಿಗೆ ಕೇಂದ್ರವು ಸ್ವಾತಂತ್ರ್ಯವಿತ್ತಿದೆ ಎಂದು ಅಧಿಕೃತ ವಲಯಗಳ ಪ್ರಕಾರ ಗೊತ್ತಾಗಿದೆ.

ಪಶ್ಚಿಮ ಬಂಗಾಳದಲ್ಲಿನ ವಿದ್ಯಮಾನಗಳನ್ನೂ, ವಿಧಾನಸಭೆಯನ್ನು ಬೇಗನೆ ಕರೆಯಲು ಮುಖ್ಯಮಂತ್ರಿ ಶ್ರೀ ಅಜಯ್‌ ಮುಖರ್ಜಿಯವರು ನಿರಾಕರಿಸಿರುವು
ದನ್ನೂ ವಾರಾಂತ್ಯದ ಅವಧಿಯಲ್ಲಿ ಉನ್ನತ ಮಟ್ಟದಲ್ಲಿ ಚರ್ಚಿಸಲಾಯಿತು. ಆದರೆ ಮಂತ್ರಿಮಂಡಲವನ್ನು ವಜಾ ಮಾಡುವುದಕ್ಕೆ ಶ್ರೀಮತಿ ಇಂದಿರಾ ಗಾಂಧಿಯವರು ವಿರೋಧಿಸಿದರೆಂದು ವರದಿ. ಹಾಗೆ ಮಾಡಿದರೆ ಎಡ ಕಮ್ಯುನಿಸ್ಟರ ಪ್ರತಿಷ್ಠೆ ಹೆಚ್ಚುವುದೆಂದು ಪ್ರಧಾನಿಯ ಭಾವನೆ.

ಮಾಸಾಂತ್ಯದಲ್ಲಿ ಬಂಗಾಳವಿಧಾನ ಸಭೆ ಕರೆಯಲು ರಾಜ್ಯಪಾಲರ ಒತ್ತಾಯ

ಕಲ್ಕತ್ತ, ನ. 15– ನವೆಂಬರ್ ಅಂತ್ಯದ ಹೊತ್ತಿಗೆ ವಿಧಾನಸಭೆ ಅಧಿವೇಶನ ಕರೆದು, ಬಲ ಪರೀಕ್ಷೆ ನಡೆಸಬೇಕೆಂದು ಮುಖ್ಯಮಂತ್ರಿ ಶ್ರೀ ಅಜಯ್ ಮುಖರ್ಜಿ ಅವರಿಗೆ ಪಶ್ಚಿಮ ಬಂಗಾಳ ರಾಜ್ಯಪಾಲ ಶ್ರೀ ಧರ್ಮವೀರ ಅವರು ಸಲಹೆ ಮಾಡಿ
ದ್ದಾರೆಂದು ನಂಬಲರ್ಹ ವಲಯಗಳಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.