ADVERTISEMENT

ಮಂಗಳವಾರ, 15-5-1962

​ಪ್ರಜಾವಾಣಿ ವಾರ್ತೆ
Published 14 ಮೇ 2012, 19:30 IST
Last Updated 14 ಮೇ 2012, 19:30 IST

ಸಂಧಾನದ ಮೂಲಕ ಗಡಿ ವಿವಾದ ಇತ್ಯರ್ಥಕ್ಕೆ
ಪುನಃ ಚೀಣಕ್ಕೆ ಕರೆ

ನವದೆಹಲಿ, ಮೇ 14 - ಲಡಕ್ ಪ್ರದೇಶದಲ್ಲಿ ಭಾರತದ ಭೂಪಟಕ್ಕೆ ಅನುಗುಣವಾಗಿ ಚೀಣೀಯರೂ ಚೀಣದ ಭೂಪಟದಂತೆ ಭಾರತೀಯರೂ ತಾತ್ಕಾಲಿಕವಾಗಿ ಹಿಂದೆ ಸರಿದು ಚೀಣ - ಭಾರತ ಗಡಿ ವಿವಾದದ ಇತ್ಯರ್ಥಕ್ಕೆ ಪ್ರಯತ್ನಿಸಬೇಕೆಂದು ಪ್ರಧಾನ ಮಂತ್ರಿ ನೆಹರೂ ಅವರು ಇಂದು ಪುನಃ ಚೀಣಕ್ಕೆ ಕರೆ ನೀಡಿದರು.

ವಿದೇಶಾಂಗ ಸಚಿವ ಶಾಖೆಯ ಬೇಡಿಕೆಗಳ ಬಗ್ಗೆ ಚರ್ಚೆಗೆ ಉತ್ತರ ಕೊಡುತ್ತ ತಮ್ಮ ಈ ಕರೆಯನ್ನು ಚೀಣವು ನಿರಾಕರಿಸಿದ್ದರೂ ಯುದ್ಧ ಮಾಡದೆ ಸಂಧಾನದ ಮೂಲಕ ವಿವಾದದ ಪರಿಹಾರಕ್ಕೆ ಇದು ಉತ್ತಮ ಮಾರ್ಗವೆಂದು ನೆಹರೂ ಹೇಳಿದರು.

ವರ್ಷಕ್ಕೆ 15,000 ರೂ. ನಿವೃತ್ತಿ ವೇತನ
ನವದೆಹಲಿ, ಮೇ 14 - ನಿವೃತ್ತ ರಾಷ್ಟ್ರಪತಿ ರಾಜೇಂದ್ರ ಪ್ರಸಾದರಿಗೆ ವರ್ಷಕ್ಕೆ 15,000 ರೂ. ನಿವೃತ್ತಿ ವೇತನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆಯೆಂದು ತಿಳಿದು ಬಂದಿದೆ.

ಜೊತೆಗೆ ಡಾ. ಪ್ರಸಾದರು ವೈಯಕ್ತಿಕ ಸೆಕ್ರೆಟೆರಿಯೇಟ್ ಹೊಂದಲು ಪ್ರತ್ಯೇಕವಾಗಿ ವರ್ಷಕ್ಕೆ 15,000 ರೂ. ಕೊಡಲು ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.