ADVERTISEMENT

ಮಂಗಳವಾರ, 26-6-1962

​ಪ್ರಜಾವಾಣಿ ವಾರ್ತೆ
Published 25 ಜೂನ್ 2012, 19:30 IST
Last Updated 25 ಜೂನ್ 2012, 19:30 IST

ಚವಾಣರ ಆಪಾದನೆಗೆ ಮುಖ್ಯಮಂತ್ರಿ ನಿರಾಕರಣೆ
ಬೆಂಗಳೂರು, ಜುನ್ 25 - ಗಡಿ ವಿವಾದ ಸಂಬಂಧದಲ್ಲಿ ಪಂಚಾಯಿತಿಗೆ ಅವಕಾಶವಿದೆಯೆಂದು ತಾವು ಭಾವಿಸುವುದಿಲ್ಲವೆಂದು ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ತಿಳಿಸಿದರು.

ನಗರದಲ್ಲಿ ವಿದ್ಯುತ್ ಕಡಿತ
ಬೆಂಗಳೂರು, ಜೂನ್ 25 - ಕಾಗೆ ಒಯ್ಯುತ್ತಿದ್ದ ತಂತಿಯ ಚೂರು ಕೆಳಗೆ ಬಿದ್ದು ತಗಲಿದ ಪರಿಣಾಮವಾಗಿ, ರಾಜಾಜಿನಗರದ ಬಳಿಯಿರುವ ರಿಸೀವಿಂಗ್ ಸ್ಟೇಷನ್ನಿನಲ್ಲಿ ಜೋಗ್‌ನಿಂದ ವಿದ್ಯುಚ್ಛಕ್ತಿಯನ್ನು ಒದಗಿಸುವ 100 ಕೆ. ವಿ. ವಿದ್ಯುತ್ ಲೈನಿಗೆ ಸೇರಿದ ತಾಮ್ರದ ಕೊಳವೆಯೊಂದು ಕರಗಿ, ಬೆಂಗಳೂರು ನಗರ ಇಂದು ಸುಮಾರು ಆರೂವರೆ ಗಂಟೆಗಳ ಕಾಲ ವಿದ್ಯುತ್‌ಚ್ಛಕ್ತಿಯಿಲ್ಲದೆ ತೊಂದರೆ ಪಡಬೇಕಾಯಿತು.

ಅಪರಾಧ ಪತ್ತೆ: ನಗರ ಪ್ರಥಮ
ಬೆಂಗಳೂರು, ಜೂನ್ 25 - 1957ರಲ್ಲಿ ರಾಷ್ಟ್ರದಲ್ಲಿ ಅಪರಾಧಗಳನ್ನು ಪತ್ತೆ ಹಚ್ಚುವುದರಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುವ ಬೆಂಗಳೂರು ನಗರ 1961ರಲ್ಲೂ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

ತಿಂಗಳ ಅಂತ್ಯದೊಳಗೆ ಸಂಪುಟ ವಿಸ್ತರಣೆ
ಬೆಂಗಳೂರು, ಜೂನ್ 25 - ಇದೇ ತಿಂಗಳ ಕೊನೆಯೊಳಗೆ ಮಂತ್ರಿಮಂಡಲ ಪೂರ್ಣವಾಗಿ ರಚಿಸಬಹುದೆಂದು ಮುಖ್ಯಮಂತ್ರಿ  ಎಸ್. ನಿಜಲಿಂಗಪ್ಪನವರು ಇಂದು ವರದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.