ADVERTISEMENT

ಮಂಗಳವಾರ, 3-5-1961

​ಪ್ರಜಾವಾಣಿ ವಾರ್ತೆ
Published 2 ಮೇ 2011, 19:30 IST
Last Updated 2 ಮೇ 2011, 19:30 IST

ಲಾವೋಸ್ ಮುಖ್ಯಕ್ಷೇತ್ರದಲ್ಲಿ ಯುದ್ಧ ಸ್ತಂಭನ
ವಿಯಂಟಯೇನ್, ಮೇ 2 - ವಾಂಗ್‌ವಿಯಾಂಗ್‌ನ ದಕ್ಷಿಣದಲ್ಲಿನ ಪ್ರಮುಖ ರಣರಂಗದಲ್ಲಿ ಕಳೆದ ರಾತ್ರಿ ಕದನ ನಿಂತಿತೆಂದೂ, ಲಾವೋಸ್‌ನಲ್ಲಿ ಸಂಪೂರ್ಣವಾಗಿ ಯುದ್ಧ ಸ್ತಂಭನ ಜಾರಿಗೆ ತರುವ ಸಂಬಂಧದ ಮಾತುಕತೆಗಳು ಇಂದೂ ಮುಂದುವರಿಯುತ್ತಿವೆಯೆಂದೂ ಬಲಪಕ್ಷದ ಆಡಳಿತದ ರಕ್ಷಣಾ ಸಚಿವ ಜನರಲ್ ಫೌಮಿಸೂಸ್ತಾನ್ ಅವರು ಇಂದು ಘೋಷಿಸಿದರು.

ತಾಂತ್ರಿಕ ತಜ್ಞರ ಮಂಡಳಿಗೆ ಶ್ರೀ ಗುಲಾಟಿ ಅಧ್ಯಕ್ಷರು
ನವದೆಹಲಿ, ಮೇ 2 - ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ನೀರು ಸರಬರಾಜನ್ನು ಹೆಚ್ಚಿಸುವ ಸಾಧ್ಯತೆ ಪರಿಶೀಲಿಸಲು ನೇಮಕ ಮಾಡಬೇಕೆಂದು ಕೇಂದ್ರ ಸರ್ಕಾರ ಉದ್ದೇಶಿಸಿರುವ ತಾಂತ್ರಿಕ ತಜ್ಞರ ಮಂಡಳಿಗೆ ಶ್ರೀ ಎನ್. ಡಿ. ಗುಲಾಟಿ ಅವರು ಅಧ್ಯಕ್ಷರಾಗಿರುವರೆಂದು ತಿಳಿದು ಬಂದಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.