ADVERTISEMENT

ಮಂಗಳವಾರ, 6-3-1962

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 19:30 IST
Last Updated 5 ಮಾರ್ಚ್ 2012, 19:30 IST

ಮಂಗಳವಾರ, 6-3-1962
ಕಾಂಗ್ರೆಸ್ ಅಧ್ಯಕ್ಷರಾಗಿಶ್ರಿಮತಿ ಇಂದಿರಾಗಾಂಧಿ?
ಭೂಪಾಲ್, ಮಾ. 5- ರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷರಾಗಿರುವ ಸಂಜೀವರೆಡ್ಡಿಯವರ ಅಧ್ಯಕ್ಷತೆಯ ಅವಧಿಯಲ್ಲಿ ಉಳಿದಿರುವ 10 ತಿಂಗಳ ಕಾಲದಲ್ಲಿ ಕಾಂಗ್ರೆಸ್ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ಶರೀಮತಿ ಇಂದಿರಾಗಾಂಧಿಯವರು ಇಚ್ಚೆಪಡದಿದ್ದರೂ, ಕಟ್ಟ ಕಡೆಗೆ ಒಪ್ಪಿಕೊಂಡಿರುವರೆಂದೂ ಇಲ್ಲಿನ ರಾಜ್ಯ ಕಾಂಗ್ರೆಸ್ಸಿನ ಸಮೀಪವರ್ತಿ ವಲಯಗಳಿಂದ ತಿಳಿದುಬಂದಿದೆ.

ಪೆಸಿಫಿಕ್ ಪ್ರದೇಶಕ್ಕೆಭಾರಿ  ಸೇನಾಪಡೆ
ವಾಷಿಂಗ್‌ಟನ್, ಮಾ. 5- ಅಮೆರಿಕವು ವಾತಾವರಣದಲ್ಲಿ ನಡೆಸಲಿರುವ ನ್ಯೂಕ್ಲಿಯರ್ ಸ್ಫೋಟಗಳ ಬಗ್ಗೆ ಸಿದ್ದತೆಗಾಗಿ 12,000 ಮಂದಿ, ಅನಿರ್ದಿಷ್ಟ ಸಂಖ್ಯೆಯ ಸಮರ ನೌಕೆಗಳು ಮತ್ತು ಸಾರಿಗೆ ಹಡಗುಗಳು ಹಾಗೂ ಹಲವು ವಿಮಾನಗಳನ್ನು ಪೆಸಿಫಿಕ್ ಪ್ರದೇಶಕ್ಕೆ ಕಳಿಸಲಾಗುವುದೆಂದೂ ಅನಂತರ ಇವು ಸ್ಫೋಟ ನಡೆಯುವ ಪ್ರದೇಶಕ್ಕೆ ಹೋಗುವುದಾಗಿಯೂ ಬಲ್ಲ ವಲಯಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.