ADVERTISEMENT

ಶುಕ್ರವಾರ, 13–9–1963

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 19:59 IST
Last Updated 12 ಸೆಪ್ಟೆಂಬರ್ 2013, 19:59 IST

ಪಾಕ್‌ ಸೇನಾ ಜಮಾವಣೆ
ನವದೆಹಲಿ, ಸೆ. 12– ಭಾರತ–ಪಾಕಿಸ್ತಾನಗಳ ನಡುವೆ ವಿವಾದಕ್ಕೊಳಗಾಗಿರುವ ಪ್ರದೇಶದಲ್ಲಿಯೇ ಮುಖ್ಯವಾಗಿ ಪಾಕಿಸ್ತಾನವು ಸೇನಾ ಜಮಾವಣೆ ನಡೆಸಿ ದೆಯೆಂದು ಪ್ರಧಾನ ಮಂತ್ರಿ ನೆಹರೂರವರು ಇಂದು ರಾಜ್ಯ ಸಭೆಯಲ್ಲಿ ಪ್ರಶ್ನೋತ್ತರ ಕಾಲದಲ್ಲಿ ತಿಳಿಸಿದರು.

ಗಡಿ ಪ್ರದೇಶದಲ್ಲಿ ಪಾಕಿಸ್ತಾನವು ಏಕೆ ಸೇನಾ ಜಮಾವಣೆ ನಡೆಸಿದೆಯೆನ್ನುವುದಕ್ಕೆ ಕಾರಣಗಳನ್ನು ನೀಡಲು ತಮಗೆ ಸಾಧ್ಯವಿಲ್ಲವೆಂದೂ ನೆಹರೂರವರು ಶ್ರೀ ಎಂ.ಎಸ್‌. ಗುರುಪಾದಸ್ವಾಮಿಗಳ ಪ್ರಶ್ನೆಗುತ್ತರವಾಗಿ ತಿಳಿಸಿದರು.

‘ನಾಜಿ’ ಭಾರತ: ಭುಟ್ಟೊ
ಕರಾಚಿ, ಸೆ. 13– ಭಾರತವು ‘ಫಾಸಿಸ್ಟ್’  ದೇಶವಾಗಿದೆಯೆಂದು ಪಾಕಿಸ್ತಾನಿ ವಿದೇಶಾಂಗ ಸಚಿವ ಜೆಡ್‌. ಎ. ಭುಟ್ಟೊ ಇಂದು ಜರೆದು ಅದನ್ನು  ಎರಡನೇ ಮಹಾಯುದ್ಧ ಕಾಲದ ನಾಜಿ ಜರ್ಮನಿಯೊಡನೆ ಹೋಲಿಸಿದರು. ಪಾಕಿಸ್ತಾನದ ಭದ್ರತೆಗೆ ಅಂತರ ರಾಷ್ಟ್ರೀಯ ಕಮ್ಯುನಿಸಂ ‘‘ಫಾಸಿಸ್ಟ್’ ಭಾರತ’ ದಿಂದ ಹೆಚ್ಚಿನ ವಿಪತ್ತಿದೆಯೆಂದು ಅವರೇ ವರದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.