ADVERTISEMENT

ಶುಕ್ರವಾರ, 14–7–1967

50ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 19:30 IST
Last Updated 13 ಜುಲೈ 2017, 19:30 IST

* ಸರ್ಕಾರದ ವಿರುದ್ಧ ಆಕ್ರೋಶ
ನವದೆಹಲಿ, ಜುಲೈ 13:
ಅಸ್ಸಾಂ – ಪೂರ್ವ ಪಾಕಿಸ್ತಾನ ಗಡಿ ಭಾಗದ ಲಾಥಿತಿಲ್ಲಾ, ದುಮಬರಿ ಮತ್ತು ಇತರ ಎರಡು ಹಳ್ಳಿಗಳನ್ನು ತನ್ನ ವಶದಲ್ಲಿ ಇರಿಸಿಕೊಳ್ಳಲು ಪಾಕಿಸ್ತಾನಕ್ಕೆ ತಾತ್ಕಾಲಿಕವಾಗಿ ಅವಕಾಶ ನೀಡಲಾಗಿದೆ ಎಂದು ವಿದೇಶಾಂಗ ಸಚಿವ ಶ್ರೀ ಚಾಗ್ಲಾ ಅವರು ಲೋಕಸಭೆಯಲ್ಲಿ ಇಂದು ಸ್ಪಷ್ಟಪಡಿಸಿದರು. ಇದನ್ನು ಕೇಳಿದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಈ ಹಳ್ಳಿಗಳನ್ನು ಪಾಕಿಸ್ತಾನವು 1963ರಲ್ಲಿ ಆಕ್ರಮಿಸಿಕೊಂಡಿದೆ.

ಈ ಪ್ರದೇಶಗಳನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿರುವುದನ್ನು ಮುಚ್ಚಿಟ್ಟು ಸರ್ಕಾರವು ಸಂಸತ್ತಿಗೆ ಹಾಗೂ ದೇಶಕ್ಕೆ ಮೋಸ ಮಾಡಿದೆ ಎಂದು ವಿರೋಧ ಪಕ್ಷಗಳ ಸದಸ್ಯರು ಆರೋಪಿಸಿದರು.

**

ADVERTISEMENT

* ಗಾಡ್ಗೀಳ್ ನೇಮಕ
ನವದೆಹಲಿ, ಜುಲೈ 13:
ಹೆಸರಾಂತ ಅರ್ಥಶಾಸ್ತ್ರಜ್ಞ ಮತ್ತು ರಾಜ್ಯಸಭಾ ಸದಸ್ಯ ಪ್ರೊ.ಡಿ.ಆರ್. ಗಾಡ್ಗೀಳ್ ಅವರನ್ನು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಇಂದು ಇಲ್ಲಿ ಅಧಿಕೃತವಾಗಿ ಘೋಷಿಸಲಾಯಿತು.

**

* ಗೌರವಧನ ನಿಲ್ಲಿಸುವ ಸೂಚನೆ
ನವದೆಹಲಿ, ಜುಲೈ 13:
ರಾಜ ವಂಶಸ್ಥರಿಗೆ ನೀಡುತ್ತಿರುವ ಗೌರವಧನ ಹಾಗೂ ಇತರ ಸೌಲಭ್ಯಗಳನ್ನು ಸ್ಥಗಿತಗೊಳಿಸುವ ಸೂಚನೆಯನ್ನು ಗೃಹ ಸಚಿವ ಶ್ರೀ ಚವಾಣ್ ಅವರು ಇಂದು ಇಲ್ಲಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.