ADVERTISEMENT

ಶುಕ್ರವಾರ 4-3-1961

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 19:30 IST
Last Updated 3 ಮಾರ್ಚ್ 2011, 19:30 IST


ಖಾತೆ ಪುನರ್ ಹಂಚಿಕೆ

ಬೆಂಗಳೂರು, ಮಾ. 3 - ನಾಲ್ಕು ಮಂದಿ ನೂತನ ಸಚಿವರ ನೇಮಕದಿಂದಾಗಿ ಜರುಗಿರುವ ಸಚಿವರ ಖಾತೆಗಳ ಪುನರ್‌ಹಂಚಿಕೆಯನ್ನು ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿ ಅವರು ಇಂದು ಮಧ್ಯಾಹ್ನ 12-30ಕ್ಕೆ ವರದಿಗಾರರಿಗೆ ತಿಳಿಸಿದರು.ತಮ್ಮ ಎಲ್ಲ ಸಹೋದ್ಯೋಗಿಗಳ ಪೂರ್ಣ ಒಪ್ಪಂದದೊಂದಿಗೆ ಖಾತೆ ಹಂಚಿರುವುದಾಗಿ ಅವರು ಹೇಳಿದರು.

ಆಂಧ್ರದಲ್ಲಿ ಉಗ್ರ ಸ್ಥಿತಿ
ಹೈದರಾಬಾದ್, ಮಾ. 3 - ಆಂಧ್ರದಲ್ಲಿನ ‘ಉಗ್ರ ರಾಜಕೀಯ ಸ್ಥಿತಿಯ’ ಬಗ್ಗೆ ಪ್ರಧಾನಮಂತ್ರಿ ನೆಹರೂ ಮತ್ತು ಕಾಂಗ್ರೆಸ್ ಅಧ್ಯಕ್ಷ ಸಂಜೀವರೆಡ್ಡಿಯವರೊಡನೆ ಮಾತುಕತೆಗಾಗಿ ಮಂತ್ರಿಗಳಾದ ಶ್ರೀ ಬ್ರಹ್ಮಾನಂದ ರೆಡ್ಡಿ ಮತ್ತು ಶ್ರೀ ಪಿ. ವಿ. ಜಿ. ರಾಜುರವರು ಹಠಾತ್ತನೆ ವಿಮಾನದ ಮೂಲಕ ಇಂದು ದೆಹಲಿಗೆ ತೆರಳಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.