ADVERTISEMENT

ಸೋಮವಾರ, 14-2-1961

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 18:30 IST
Last Updated 13 ಫೆಬ್ರುವರಿ 2011, 18:30 IST

ಚೀಣ ಕ್ರಮವನ್ನು    ಭಾರತ ಒಪ್ಪದು
ನವದೆಹಲಿ, ಫೆ. 13- “ಭಾರತ ಹಾಗೂ ಚೀಣ ನಡುವಣ ಗಡಿ ಬಗ್ಗೆ ಚೀಣ ಕೈಗೊಂಡಿರುವ ಏಕಪಕ್ಷೀಯ ಕ್ರಮ ಅಥವಾ ಇತ್ಯರ್ಥವನ್ನು ಭಾರತ ಒಪ್ಪುವುದಿಲ್ಲ” ಎಂಬುದಾಗಿ ರಾಷ್ಟ್ರಾಧ್ಯಕ್ಷ ಡಾ. ರಾಜೇಂದ್ರಪ್ರಸಾದರು ಇಂದು ಪಾರ್ಲಿಮೆಂಟಿನ ಬಡ್ಜೆಟ್   ಅಧಿವೇಶನ ಉದ್ಘಾಟಿಸಿ ಭಾಷಣ ಮಾಡುತ್ತಾ ಘೋಷಿಸಿದರು.

ಹೊಸ ವೇತನ ತೀರ್ಮಾನ
ಬೆಂಗಳೂರು, ಫೆ. 13- ಸುಮಾರು 18 ಗಂಟೆ ಪರಿಶೀಲಿಸಿದ ಮಂತ್ರಿಮಂಡಲ ರಾಜ್ಯದ ಒಂದು ಲಕ್ಷ ಅರವತ್ತು ಸಾವಿರ ನೌಕರರ ವೇತನ ವಿಮರ್ಶೆ ಸಮಿತಿಯ ಶಿಫಾರಸುಗಳನ್ನು ಇಂದು “ಕೆಲ ಬದಲಾವಣೆಗಳೊಡನೆ” ಅಂಗೀಕರಿಸಿತು.  1961ನೇ ಜನವರಿ 1 ರಿಂದ ಜಾರಿಗೆ ಬರುವ ನೂತನ ವೇತನ ವ್ಯವಸ್ಥೆಯಲ್ಲಿ ನೌಕರನ ಕನಿಷ್ಠ ವೇತನ ತಿಂಗಳಿಗೆ 60 ರೂಪಾಯಿ (50 ರೂಪಾಯಿ ಮೂಲ ಸಂಬಳ ಮತ್ತು 10 ರೂಪಾಯಿ ತುಟ್ಟಿಭತ್ಯ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.