ADVERTISEMENT

25 ವರ್ಷಗಳ ಹಿಂದೆ | ಭಾನುವಾರ 12–3–1995

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 19:33 IST
Last Updated 11 ಮಾರ್ಚ್ 2020, 19:33 IST

ಮಹಾರಾಷ್ಟ್ರ: ಶಿವಸೇನೆ– ಬಿಜೆಪಿ ಮೈತ್ರಿಕೂಟದ ದಾಪುಗಾಲು
ನವದೆಹಲಿ, ಮಾರ್ಚ್‌ 11 (ಪಿಟಿಐ, ಯುಎನ್‌ಐ):
ಮಹಾರಾಷ್ಟ್ರ, ಒರಿಸ್ಸಾ ಮತ್ತು ಗುಜರಾತ್‌ ವಿಧಾನಸಭೆ ಚುನಾವಣೆಗಳ ಮತ ಎಣಿಕೆ ಕಾರ್ಯ ಮುಂದುವರಿಯುತ್ತಿದ್ದು, ಮಧ್ಯರಾತ್ರಿವರೆಗೆ ದೊರೆತಿರುವ ಮಾಹಿತಿಗಳ ಪ್ರಕಾರ ಗುಜರಾತ್‌ನಲ್ಲಿ ಬಿಜೆಪಿ ಸ್ಪಷ್ಟ ಮುನ್ನಡೆ ಸಾಧಿಸಿದೆ. ಮಹಾರಾಷ್ಟ್ರದಲ್ಲೂ ಆಡಳಿತಾರೂಢ ಕಾಂಗೈಗೆ ತೀವ್ರ ಮುಖಭಂಗವಾಗಿದ್ದು ಶಿವಸೇನೆ– ಬಿಜೆಪಿ ಮೈತ್ರಿಕೂಟ ಅಧಿಕಾರ ಸೂತ್ರ ಹಿಡಿಯುವ ಸೂಚನೆಗಳಿವೆ.

ಆದರೆ ಈ ಎರಡೂ ರಾಜ್ಯಗಳಲ್ಲಿ ಹಿಂದೆ ಬಿದ್ದಿರುವ ಕಾಂಗೈ, ಒರಿಸ್ಸಾದಲ್ಲಿ ಆಡಳಿತಾರೂಢ ಜನತಾ ದಳವನ್ನು ಹಿಂದೆ ಹಾಕಿದೆ.

ಬಿಹಾರ ಚುನಾವಣೆ ಹಿಂಸೆಗೆ ಮ್ಯಾಜಿಸ್ಟ್ರೇಟ್‌ ಸೇರಿ 7 ಬಲಿ
ನವದೆಹಲಿ, ಮಾರ್ಚ್‌ 11 (ಯುಎನ್‌ಐ, ಪಿಟಿಐ):
ಬಿಹಾರದಲ್ಲಿ ಘರ್ಷಣೆ, ಮತಪೆಟ್ಟಿಗೆ ಅಪಹರಣ, ಸ್ಫೋಟ, ಹಿಂಸಾಚಾರದ ಮಧ್ಯೆ ಇಂದು ನಡೆದ ವಿಧಾನಸಭೆ ಚುನಾವಣೆಯ ಮೊದಲ ಸುತ್ತಿನಲ್ಲಿ ಶೇ 60ರಷ್ಟು ಮತದಾನವಾಗಿದೆ. ಬಾಂಬ್‌ ಸ್ಫೋಟ ಮತ್ತು ಹಿಂಸೆಗೆ ಒಬ್ಬ ಮ್ಯಾಜಿಸ್ಟ್ರೇಟ್‌, ಅವರ ವಾಹನದ ಚಾಲಕ ಸೇರಿ ಕನಿಷ್ಠ ಏಳು ಮಂದಿ ಬಲಿಯಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.