ADVERTISEMENT

ಶುಕ್ರವಾರ, 26–8–1994

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 20:00 IST
Last Updated 25 ಆಗಸ್ಟ್ 2019, 20:00 IST

ಶೇ 69 ಮೀಸಲು– ತಮಿಳ್ನಾಡು ಮಸೂದೆಗೆ ಸಂವಿಧಾನ ರಕ್ಷಣೆ
ನವದೆಹಲಿ, ಆ. 25 (ಪಿಟಿಐ)– ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿಗೆ ಸರ್ಕಾರಿ ನೌಕರಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡ 69 ಸ್ಥಾನಗಳನ್ನು ಮೀಸಲು ಇರಿಸುವ ತಮಿಳುನಾಡು ಶಾಸನಕ್ಕೆ ಸಂಸತ್ತು ಇಂದು ತನ್ನ ಒಪ್ಪಿಗೆ ನೀಡಿತು.

ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಈ ಮಸೂದೆಯ ಪರವಾಗಿ ಲೋಕಸಭೆಯಲ್ಲಿ ಇಂದು ಸದನದಲ್ಲಿ ಹಾಜರಿದ್ದ ಎಲ್ಲ 348 ಸದಸ್ಯರೂ ಮತ ಚಲಾಯಿಸಿದರು.

ಇದರಿಂದಾಗಿ ಅದು ಅವಿರೋಧವಾಗಿ ಅಂಗೀಕೃತವಾಯಿತು. ಈ ಕಾಯ್ದೆಯನ್ನು ನ್ಯಾಯಾಂಗ ಪರಿಶೀಲನೆ ವ್ಯಾಪ್ತಿಯಿಂದ ಹೊರಗಿಡುವ ಸಲುವಾಗಿ ಸಂವಿಧಾನ ಒಂಬತ್ತನೇ ಪರಿಚ್ಛೇದದಲ್ಲಿ ಅದನ್ನು ಸೇರಿಸುವುದು ಮಸೂದೆಯ ಉದ್ದೇಶ.

ADVERTISEMENT

ಮುತ್ತಿಗೆ ತಪ್ಪಿಸಲು ನಡುರಾತ್ರಿ ಬಂಧನ
ಬೆಂಗಳೂರು, ಆ. 25– ದೂರದ ಊರುಗಳಿಂದ ಊಟದ ಬುತ್ತಿ, ಬಟ್ಟೆ ಬರೆಗಳ ಗಂಟುಗಳನ್ನು ತಲೆ, ಕಂಕುಳಲ್ಲಿ ಹೊತ್ತು ನಗರಕ್ಕೆ ಬಂದ ನೂರಾರು ಅಂಗನವಾಡಿ ಕಾರ್ಯಕರ್ತೆಯರ ‘ವಿಧಾನ ಸೌಧ ಮುತ್ತಿಗೆ’ ಕಾರ್ಯಕ್ರಮವನ್ನು ವಿಫಲಗೊಳಿಸಲು ಮಧ್ಯರಾತ್ರಿಯೇ ಪೊಲೀಸರು ಬಂಧಿಸಿದರು.

ಮಧ್ಯರಾತ್ರಿ 2.30ರ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಿದ್ದೆಯಲ್ಲಿದ್ದಾಗಲೇ ಅವರು ತಂಗಿದ್ದ ಛತ್ರಗಳಿಗೆ ಪೊಲೀಸರು ಬೀಗ ಹಾಕಿದರು. ನಗರದ ರೈಲು ನಿಲ್ದಾಣದ ಬಳಿಯ ಗುಬ್ಬಿ ತೋಟದಪ್ಪ ಛತ್ರ, ಮಹಾನಗರ ಪಾಲಿಕೆ ಬಳಿಯಿರುವ ದೇವಾಂಗ ಛತ್ರ ಹಾಗೂ ಬಬ್ಬೂರ್ ಹಾಸ್ಟೆಲ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತಂಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.