ADVERTISEMENT

25 ವರ್ಷಗಳ ಹಿಂದೆ | ಗುರುವಾರ, 29–6–1995

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 19:30 IST
Last Updated 28 ಜೂನ್ 2020, 19:30 IST

ಸಂಕೀರ್ಣವಾಗುತ್ತಿರುವ ರಾಜ್ಯದ ವೃತ್ತಿಶಿಕ್ಷಣ ನೀತಿ
ನವದೆಹಲಿ, ಜೂನ್‌ 28–
ತಾಂತ್ರಿಕ, ವೈದ್ಯಕೀಯ ಮುಂತಾದ ಅತಿ ಹೆಚ್ಚಿನ ವೃತ್ತಿ ಕಾಲೇಜುಗಳನ್ನು ಹೊಂದಿರುವ ಕರ್ನಾಟಕದ ವೃತ್ತಿಶಿಕ್ಷಣ ನೀತಿ ಒಂದಲ್ಲ ಒಂದು ರೀತಿಯಲ್ಲಿ ಸಂಕೀರ್ಣವಾಗುತ್ತಿದೆ. ಈ ವ್ಯವಸ್ಥೆಯಲ್ಲಿನ ಹಲವಾರು ದೋಷಗಳನ್ನು ಪ್ರಶ್ನಿಸಿ 26 ಸಂಸ್ಥೆಗಳು ಅಥವಾ ವ್ಯಕ್ತಿಗಳು 37 ರಿಟ್‌ ಅರ್ಜಿಗಳನ್ನು ಸಲ್ಲಿಸಿದ್ದು ಈಗ ಸುಪ್ರೀಂ ಕೋರ್ಟ್‌ ತೀರ್ಪಿಗಾಗಿ ಎದುರು ನೋಡಲಾಗುತ್ತಿದೆ.

ಖಾಸಗಿ ಕಾಲೇಜುಗಳಲ್ಲಿನ ವಂತಿಗೆ, ಸರ್ಕಾರ ರೂಪಿಸಿದ ಶುಲ್ಕ ನೀತಿ ಮತ್ತು ಮೀಸಲಾತಿಯನ್ನು ಪ್ರಶ್ನಿಸಿ ಆಡಳಿತ ಮಂಡಳಿಗಳಿಗೆ ಮತ್ತು ಸರ್ಕಾರಕ್ಕೆ ತಲೆನೋವು ತಂದವರು ಹೊರರಾಜ್ಯದ ವಿದ್ಯಾರ್ಥಿಗಳೇ ಎಂಬುದನ್ನು ಮೊಕದ್ದಮೆಗಳನ್ನು ಪರಿಶೀಲಿಸಿದಾಗ ಗೊತ್ತಾಗುವುದು.

ಬರದ ನೆರಳಿನಲ್ಲಿ ಕೊಡಗು
ಮಡಿಕೇರಿ, ಜೂನ್‌ 28–
ಮಳೆಕಾಡನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಈ ಸಾರಿ ಮುಂಗಾರು ತೀವ್ರವಾಗಿ ದುರ್ಬಲಗೊಂಡಿದ್ದು, ಬರದ ಸೂಚನೆ ಅರಿತು ಸಮೂಹ ಕಂಗಾಲಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಕೃಷಿ ಇಲಾಖೆಯ ಲೆಕ್ಕಾಚಾರದಂತೆ ಜಿಲ್ಲೆಯ ಭತ್ತದ ಉತ್ಪಾದನೆಯಲ್ಲಿ ಶೇಕಡ 90ರಷ್ಟು ಕಡಿಮೆ ಆಗುವ ಸಾಧ್ಯತೆ ಇದೆ.

ADVERTISEMENT

ಮುಂಗಾರು ಇದೇ ರೀತಿ ದುರ್ಬಲ ಗೊಂಡರೆ ಜಿಲ್ಲೆಯಲ್ಲಿ ಮಳೆಆಶ್ರಿತ ಬೆಳೆಯಾದ ಭತ್ತದ ಬೇಸಾಯ ತೊಂದರೆಗೆ ಈಡಾಗುತ್ತದೆ. ಶೇಕಡ 70ರಷ್ಟು ಭಾಗ ನಾಟಿಯಾಗದೆ ಉಳಿಯುವ ಸಾದ್ಯತೆ ಇದೆ ಎಂದು ಕೃಷಿ ಇಲಾಖೆ ಆತಂಕ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.