ADVERTISEMENT

ಮಂಗಳವಾರ, 15–11–1994

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 20:39 IST
Last Updated 14 ನವೆಂಬರ್ 2019, 20:39 IST

6 ಶಾಸಕರು ಸೇರಿ 33 ಬಂಡಾಯ ಕಾಂಗೈ ಅಭ್ಯರ್ಥಿಗಳ ಉಚ್ಚಾಟನೆ
ಬೆಂಗಳೂರು, ನ. 14–
ವಿಧಾನಸಭೆ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ ಹಾಲಿ ಶಾಸಕರಾದ ಜಿ.ಎಸ್. ಶಿವನಂಜಪ್ಪ, ರೇಣುಕಾ ರಾಜೇಂದ್ರನ್, ಎ.ವಿ. ಉಮಾಪತಿ, ಡಿ.ಕೆ. ಶಿವಕುಮಾರ್, ಎಸ್.ವಿ. ಅಶ್ವತ್ಥ
ನಾರಾಯಣರೆಡ್ಡಿ, ಕೆ. ಭೀಮಣ್ಣ ಸೇರಿದಂತೆ 33 ಜನರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.

ಅಧಿಕೃತ ಅಭ್ಯರ್ಥಿಗಳ ಪರವಾಗಿ ನಿವೃತ್ತರಾಗುವಂತೆ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಪ್ರಧಾನಿ ಪಿ.ವಿ. ನರಸಿಂಹರಾವ್ ಮಾಡಿದ ಮನವಿಗೂ ಕಿವಿಗೊಡದೆ ಕಣದಲ್ಲಿ ಉಳಿಯುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಆಪಾದನೆ ಅವರ ಮೇಲಿದೆ.

ಭ್ರಷ್ಟರಿಗೆ ಮತ ಬೇಡ: ಎಸ್ಸೆನ್
ನವದೆಹಲಿ, ನ. 14–
‘ಆಯೋಗ್ಯರಿಗೆ, ಭ್ರಷ್ಟರಿಗೆ ಮತ್ತು ರಾಜಕಾರಣದಿಂದ ಹಣ ಮಾಡಿ ಬೆಂಗಳೂರಿನಲ್ಲಿ ಬೃಹತ್ ಬಂಗಲೆಗಳನ್ನು ಕಟ್ಟಿಕೊಂಡು ತಮ್ಮನ್ನು ಆರಿಸಿದ ಜನರನ್ನು ಮರೆತು ಐಷಾರಾಮದ ಜೀವನ ಕಳೆಯುವವರಿಗೆ ಮತ ನೀಡಬೇಡಿ.

ADVERTISEMENT

-ಇದು ಕರ್ನಾಟಕದ ಮತದಾರರಿಗೆ ಹಿರಿಯ ರಾಜಕಾರಣಿ ಎಸ್. ನಿಜಲಿಂಗಪ್ಪ ಅವರ ಹಿತನುಡಿ. ‘ಇಂದು ಎಲ್ಲ ಪಕ್ಷಗಳೂ ಹಾಳಾಗಿವೆ. ಯಾವ ಪ‍ಕ್ಷವೂ ಒಳ್ಳೆಯದು ಎಂದು ಹೇಳುವ ಕಾಲ ಈಗಿಲ್ಲ’ ಎಂಬುದು ಅವರ ಸ್ಪಷ್ಟ ನಿಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.