ADVERTISEMENT

25 ವರ್ಷಗಳ ಹಿಂದೆ: 0–10–1997

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 21:00 IST
Last Updated 8 ಅಕ್ಟೋಬರ್ 2022, 21:00 IST

l ಮಿಗ್‌: ಭಾರತ – ರಷ್ಯಾಜಂಟಿ ಯೋಜನೆ

ಮಾಸ್ಕೊ, ಅಕ್ಟೋಬರ್‌ 8 (ಪಿಟಿಐ)– ಅತ್ಯಾಧುನಿಕ ‘ಮಿಗ್‌–ಎಟಿ’ ಯುದ್ಧ ವಿಮಾನವನ್ನು ಜಂಟಿಯಾಗಿ ಉತ್ಪಾದಿಸುವ ರಷ್ಯಾದ ಆಹ್ವಾನಕ್ಕೆ ಭಾರತ ತನ್ನ ಒಪ್ಪಿಗೆ ಸೂಚಿಸಿತು.

ಜಂಟಿಯಾಗಿ ಯುದ್ಧವಿಮಾನ ತಯಾರಿಸುವ ಆಹ್ವಾನವನ್ನು ಮಿಗ್‌ ವಿಮಾನ ನಿರ್ಮಾಣ ಘಟಕದ ನಿರ್ದೇಶಕ ಗ್ರಿಗೊರಿ ನೆಮೊವ್‌, ರಕ್ಷಣಾ ಸಚಿವ ಮುಲಾಯಂ ಸಿಂಗ್‌ ಯಾದವ್‌ ಅವರಿಗೆ ನೀಡಿದರು. ಭಾರತ ಮತ್ತು ರಷ್ಯಾ ನಡುವಿನ ದೀರ್ಘಕಾಲದ ರಕ್ಷಣಾ ಸಹಕಾರ ಒಪ್ಪಂದದ ಹಿನ್ನೆಲೆಯಲ್ಲಿ ಭಾರತ ಈ ಆಹ್ವಾನ ವನ್ನು ಪರಿಗಣಿಸುವುದು ಎಂದು ಯಾದವ್‌ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.