ADVERTISEMENT

ಗುರುವಾರ, 18–8–1994

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 20:00 IST
Last Updated 17 ಆಗಸ್ಟ್ 2019, 20:00 IST

ಕ್ರಿಯಾವರದಿ ಪುನರ್ವಿಮರ್ಶೆಗೆ ಒಪ್ಪಿಗೆ ಪ್ರತಿಪಕ್ಷ ಸಂಸತ್ ಬಹಿಷ್ಕಾರ ಅಂತ್ಯನವದೆಹಲಿ, ಆ. 17 (ಪಿಟಿಐ, ಯುಎನ್‌ಐ)– ಷೇರು ಹಗರಣಕ್ಕೆ ಸಂಬಂಧಿಸಿದಂತೆ ಜೆಪಿಸಿ ಶಿಫಾರಸುಗಳ ವಿಷಯದಲ್ಲಿ ಸರಕಾರದ ಕ್ರಿಯಾ ವರದಿಗೆ ಬಂದ ಪ್ರತಿಪಕ್ಷಗಳ ಆಕ್ಷೇಪಣೆಗಳನ್ನು ಸರಕಾರ ಭಾಗಶಃ ಒಪ್ಪಿಕೊಂಡ ಪರಿಣಾಮವಾಗಿ ಪ್ರತಿ ಪಕ್ಷಗಳು ಇಂದು ಸಂಸತ್ತಿನ ತಮ್ಮ 16 ದಿನಗಳ ಬಹಿಷ್ಕಾರವನ್ನು ಅಂತ್ಯ ಗೊಳಿಸಿ ಎರಡೂ ಸದನಗಳಿಗೆ ಹಾಜರಾದವು.

ಎರಡೂ ಶಿಬಿರಗಳ ಸೌಮ್ಯವಾದಿಗಳ ಅವಿರತ ಯತ್ನದ ಫಲವಾಗಿ ಇಂದಿನ ಒಪ್ಪಂದ ಸಾಧ್ಯವಾಗಿದೆ. ವಿಷಯವನ್ನು ರಾಜ್ಯಸಭೆಯಲ್ಲಿ ಅಧ್ಯಕ್ಷ ಕೆ.ಆರ್. ನಾರಾಯಣನ್‌ ಹಾಗೂ ಲೋಕಸಭೆಯಲ್ಲಿ ಸ್ಪೀಕರ್ ಶಿವರಾಜ ಪಾಟೀಲ್ ಪ್ರಕಟಿಸಿದರು.

ಭೂಮಿಯಿಂದ ಎದ್ದ ಹೊಗೆ!

ADVERTISEMENT

ಚಿತ್ರದುರ್ಗ, ಆ. 17– ಇಲ್ಲಿಗೆ 50 ಕಿ.ಮೀ. ದೂರದ ಜಗಳೂರು ತಾಲ್ಲೂಕು ಕೆಚ್ಚೇನಹಳ್ಳಿಯಲ್ಲಿ ಇಂದು ಬೆಳಿಗ್ಗೆ ಭೂಮಿಯಿಂದ ಇದ್ದಕ್ಕಿದ್ದ ಹಾಗೆಯೇ ಹೊಗೆ ಮೇಲೆದ್ದ ವಿಸ್ಮಯಕಾರಿ ಘಟನೆ ನಡೆದಿದೆ.

‘ಬಸಪ್ಪ ಎಂಬುವರ ಎರಡು ಎಕರೆ ಜಮೀನಿನ ಪ್ರದೇಶದಲ್ಲೂ, ಷಣ್ಮುಖಪ್ಪ ಎಂಬುವರ ಹೊಲದ ಒಂದು ಭಾಗದಲ್ಲೂ ಇದ್ದಕ್ಕಿದ್ದಂತೆ ಹೊಗೆ ಉದ್ಭವವಾಯಿತು. ಗ್ರಾಮಸ್ಥರು ವೀಕ್ಷಿಸುತ್ತಿದ್ದಂತೆಯೇ ಹೊಗೆ ಆವಿ ಆಯಿತು. ತಕ್ಷಣ ಅವರು ತಮ್ಮ ಹೊಲಗಳಿಗೆ ಹೋಗಿ ನೋಡಿ ದಾಗ ಹೊಲ ಬಿಸಿಯಾಗಿತ್ತು’ ಎಂದು ಸ್ಥಳಕ್ಕೆ ಭೇಟಿ ನೀಡಿದ ಪತ್ರಕರ್ತರಿಗೆ ಗ್ರಾಮಸ್ಥರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.