ADVERTISEMENT

ಬುಧವಾರ, 4–5–1994

​ಪ್ರಜಾವಾಣಿ ವಾರ್ತೆ
Published 3 ಮೇ 2019, 20:15 IST
Last Updated 3 ಮೇ 2019, 20:15 IST

ಪರಮಾಣು ಒಪ್ಪಂದಕ್ಕೆ ಭಾರತ ಸಹಿ ಹಾಕದು: ಪಿವಿಎನ್
ನವದೆಹಲಿ, ಮೇ 3 (ಯುಎನ್‌ಐ, ಪಿಟಿಐ)– ಪರಮಾಣು ಪ್ರಸರಣ ತಡೆ ವಿಷಯವಾಗಿ ಯಾವುದೇ ಪ್ರಾದೇಶಿಕ ಕಟ್ಟುಪಾಡಿಗೆ ಭಾರತ ಒಪ್ಪಿಕೊಳ್ಳದು, ಅಲ್ಲದೆ ಪರಮಾಣು ಪ್ರಸರಣ ತಡೆ ಒಪ್ಪಂದಕ್ಕೆ ಈಗಿನ ರೂಪದಲ್ಲಿ ಸಹಿ ಹಾಕದು ಮಾತ್ರವಲ್ಲ ಅದನ್ನು ಇಡೀ
ವಿಶ್ವಕ್ಕೆ ನಿಷ್ಪಕ್ಷಪಾತವಾಗಿ ಹಾಗೂ ಸಮಗ್ರವಾಗಿ ಅನ್ವಯಿಸದೆ 1995ರ ನಂತರಕ್ಕೂ ವಿಸ್ತರಿಸಿದರೆ ಆಗಲೂ ಭಾರತ ಅಂಕಿತ ಹಾಕದು ಎಂದು ಪ್ರಧಾನಿ ಪಿ.ವಿ. ನರಸಿಂಹ ರಾವ್ ಇಂದು ಘೋಷಿಸಿದರು.

1995ರಲ್ಲಿ ನಡೆಯಲಿರುವ ಪರಮಾಣು ಪ್ರಸರಣ ತಡೆ ಒಪ್ಪಂದ ಮರುಪ‍ರಿಶೀಲನೆ ಸಭೆಯಲ್ಲಿ ಭಾರತ ಭಾಗವಹಿಸಿ ತನ್ನ ನಿಲುಮೆಯನ್ನು ಸ್ಪಷ್ಟಪಡಿಸುವುದು ಎಂದು ರಕ್ಷಣಾ ಖಾತೆಯ ಕಾರ್ಯನಿರ್ವಹಣೆ ವಿಷಯದಲ್ಲಿ ರಾಜ್ಯಸಭೆಯಲ್ಲಿ ನಡೆದ ಚರ್ಚೆಗೆ ಉತ್ತರ ನೀಡುತ್ತ ಪ್ರಧಾನಿ ಹೇಳಿದರು.

ಸಿಂಹಗಳ ಸಂಖ್ಯೆ ಹೆಚ್ಚಳ
ನವದೆಹಲಿ, ಮೇ 3 (ಯುಎನ್ಐ)– ಕಳೆದ 15 ವರ್ಷಗಳಲ್ಲಿ ದೇಶದಲ್ಲಿನ ಸಿಂಹಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ.

ADVERTISEMENT

ಪರಿಸರ ಮತ್ತು ಅರಣ್ಯ ಖಾತೆಯ ಸಚಿವ ಕಮಲ್‌ನಾಥ್ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿಈ ವಿಷಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.