ADVERTISEMENT

50 ವರ್ಷಗಳ ಹಿಂದೆ: ಬುಧವಾರ, 20–1–1971

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 19:30 IST
Last Updated 19 ಜನವರಿ 2021, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕೆಲ ಸಚಿವರು, ಶಾಸಕರ ಪಕ್ಷಾಂತರ ಸನ್ನಿಹಿತ?

ಬೆಂಗಳೂರು, ಜ. 19– ಜನವರಿ ತಿಂಗಳ ಅಂತ್ಯದೊಳಗೆ ಸಂಸ್ಥಾಕಾಂಗ್ರೆಸ್ಸಿನ ಕೆಲ ಶಾಸಕರು ಹಾಗೂ ಕೆಲ ಸಚಿವರು ಆಡಳಿತ ಕಾಂಗ್ರೆಸ್ಸಿಗೆಸೇರುವ ಸಾಧ್ಯತೆ ಇದೆ ಎಂಬ ಮಾತು ರಾಜಕೀಯ ವಲಯದಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ.

ಮುರಾರಜಿ ಆಸ್ತಿಯೆಲ್ಲ ವಿದ್ಯಾಪೀಠಕ್ಕೆ

ADVERTISEMENT

ಸೂರತ್‌, ಜ. 19– ‘ನನಗೆ ಈಗ ಒಂದು ಚೂರು ಆಸ್ತಿಯೂ ಇಲ್ಲ. ಒಂದು ಮನೆ ಸಹ ಇಲ್ಲ’ ಎಂದು ಸಂಸ್ಥಾ ಕಾಂಗ್ರೆಸ್‌ ನಾಯಕ ಮುರಾರಜಿ ದೇಸಾಯಿಯವರು ಸೋಮವಾರ ಇಲ್ಲಿ ತಿಳಿಸಿದರು.

ಚುನಾವಣೆ ಸಭೆಯೊಂದರಲ್ಲಿ ಮಾತನಾಡಿದ ಅವರು, ತಮ್ಮ ಆಸ್ತಿ ಎಲ್ಲ ಗುಜುರಾತ್‌ ವಿದ್ಯಾಪೀಠಕ್ಕೆ ಸೇರುವಂತೆ ತಾವು ಉಯಿಲು ಮಾಡಿರುವುದಾಗಿ ಹೇಳಿದರು.

‘ನನ್ನ ಮಗನೂ ನನ್ನಂತೆಯೇ ಸರಳ ಜೀವನ ನಡೆಸಬೇಕೆಂದು ನೀವು ನಿರೀಕ್ಷಿಸಲಾಗದು. ಆದರೆ, ಆತನ ವಿರುದ್ಧ ಮಾಡಲಾದ ಆಪಾದನೆಗಳೆಲ್ಲ ನಿರಾಧಾರವಾದವು ಎಂದು ಸಾಬೀತಾಗಿದೆ’ ಎಂದು ಅವರು
ಹೇಳಿದರು.

ಅವಿಭಜಿತ ಕಾಂಗ್ರೆಸ್ಸಿನ ಸಮಾಜವಾದಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಪ್ರತಿಗಾಮಿ ಶಕ್ತಿಗಳು ಆಡಚಣೆಯೊಡ್ಡಿದ್ದವೆಂಬ ಶ್ರೀಮತಿ ಇಂದಿರಾ ಗಾಂಧಿಯವರ ಆಪಾದನೆಯನ್ನು ಅವರು ತಿರಸ್ಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.