ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ: ಶುಕ್ರವಾರ, 8–1–1971

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 19:30 IST
Last Updated 7 ಜನವರಿ 2021, 19:30 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಚುನಾವಣಾ ಆಯೋಗದ ಘೋಷಣೆ

ನವದೆಹಲಿ, ಜ. 7– ‘ನಿರ್ಭಯದಿಂದ ಮತದಾನ ಮಾಡಿ: ನಿಮ್ಮ ಮತ ರಹಸ್ಯವಾಗಿ ಇರುತ್ತದೆ’– ಮುಂದಿನ ತಿಂಗಳ ಆದಿ ಭಾಗದಿಂದ ರಾಷ್ಟ್ರದಾದ್ಯಂತ ಸಿನಿಮಾ ‘ಸ್ಲೈಡ್‌’ಗಳ ಮೂಲಕ ಜನಪ್ರಿಯಗೊಳಿಸಲು ಚುನಾವಣಾ ಆಯೋಗ ಉದ್ದೇಶಿಸಿರುವ ಮೂರು ಘೋಷಣೆಗಳಲ್ಲಿ ಇದೂ ಒಂದು.

ಚುನಾವಣೆಯಲ್ಲಿ ಭ್ರಷ್ಟಾಚಾರ ತಪ್ಪಿಸಲು, ಮತದಾರರಿಗೆ ತಿಳಿವಳಿಕೆ ನೀಡಲು ಈ ಕಾರ್ಯ ಕೈಗೊಳ್ಳಲಾಗುವುದು. ಇನ್ನೆರಡು ಘೋಷಣೆಗಳು: ‘ಮತ ಚಲಾಯಿಸುವುದಕ್ಕೆ ಲಂಚ ತೆಗೆದುಕೊಳ್ಳಬೇಡಿ ಅಥವಾ ಯಾವ ಪ್ರೇರಣೆಗೊಳಗಾಗಬೇಡಿ’, ‘ನಿಮ್ಮ ಮತಗಟ್ಟೆ ಹತ್ತಿರವಿದೆ. ಅಭ್ಯರ್ಥಿ ಅಥವಾ ಅವರ ಏಜೆಂಟ್‌ ನೀಡುವ ಸಾರಿಗೆ ಸೌಲಭ್ಯ ಬಳಸಬೇಡಿ’.

ADVERTISEMENT

ರಾಮನ್‌ ರೋಸ್‌

ಬೆಂಗಳೂರು, ಜ. 7– ಭಾರತದ ಕೃಷಿ ತಜ್ಞರು ಸೃಜಿಸಿರುವ ಅಚ್ಚನೀಲಿ ಗುಲಾಬಿಯು ಸುಪ್ರಸಿದ್ಧ ವಿಜ್ಞಾನಿ ಡಾ. ಸಿ.ವಿ.ರಾಮನ್‌ ಅವರ ಹೆಸರನ್ನು ಪಡೆಯಲಿದೆ. ಭಾರತೀಯ ವ್ಯವಸಾಯ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಈ ಗುಲಾಬಿಯನ್ನು ಪುಷ್ಪಪ್ರಿಯರಾಗಿ ಅವುಗಳ ವರ್ಣ ಹಾಗೂ ಬೆಳವಣಿಗೆ ಕುರಿತು ಸಂಶೋಧನೆ ನಡೆಸಿದ ವಿಜ್ಞಾನಿಯ ನೆನಪಿಗೆ ಮುಡಿಪಾಗಿಡಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.