ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ | ಸೋಮವಾರ, 21–9–1970

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 19:30 IST
Last Updated 20 ಸೆಪ್ಟೆಂಬರ್ 2020, 19:30 IST
   

ಕುಟುಂಬಕ್ಕೆ 25 ಎಕರೆಗಿಂತ ಹೆಚ್ಚು ನೀರಾವರಿ ಭೂಮಿ ಬೇಡ: ಕೇಂದ್ರದ ಸಲಹೆ
ನವದೆಹಲಿ, ಸೆ. 20–
ಒಂದು ಕುಟುಂಬ ಹದಿನೈದರಿಂದ ಇಪ್ಪತ್ತೈದು ಎಕರೆಗಿಂತ ಹೆಚ್ಚು ನೀರಾವರಿ ಜಮೀನು ಹೊಂದಿರಬಾರದೆಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸಲಹೆ ಮಾಡಿದೆ.

ಭೂಮಿತಿ ಕುರಿತು ರಾಜ್ಯ ಸರ್ಕಾರಗಳಿಗೆ ನೀಡಿರುವ ಸಲಹೆಯಲ್ಲಿ ಮೇಲಿನಂತೆ ಸೂಚಿಸಿರುವ ಕೇಂದ್ರ ಸರ್ಕಾರ, ಇತರ ಜಮೀನಿನ ಮಿತಿ 30ರಿಂದ 50 ಎಕರೆಗಿಂತ ಹೆಚ್ಚಿರಬಾರದೆಂದು ತಿಳಿಸಿದೆ.

**
ಚಂದ್ರನ ಮೇಲೆ ರಷ್ಯಾದ ಮಾನವರಹಿತ ಲೂನಾ
ಮಾಸ್ಕೊ, ಸೆ. 20–
ರಷ್ಯಾದ ಮಾನವರಹಿತ ಬಾಹ್ಯಾಕಾಶ ನೌಕೆ ಲೂನಾ– 16 ಚಂದ್ರನ ಫಲಶಕ್ತಿ ಸಾಗರದ ಶುಷ್ಕ ಮೇಲ್ಮೈ ಮೇಲೆ ಇಂದು ಮೆತ್ತಗೆ ಇಳಿಯಿತೆಂದು ರಷ್ಯಾದ ವಾರ್ತಾ ಸಂಸ್ಥೆ ತಾಸ್‌ ಪ್ರಕಟಿಸಿದೆ.

ADVERTISEMENT

ಚಂದ್ರನ ಮೇಲೆ ಮೆಲ್ಲನೆ ಇಳಿದ ರಷ್ಯಾದ ಅನ್ವೇಷಕ ನೌಕೆಗಳಲ್ಲಿ ಇದು ಮೂರನೆಯದು. ಆದರೆ, ಇದು ಬಾಹ್ಯಾಕಾಶ ವಿಜ್ಞಾನಿಗಳು ಇದುವರೆಗೆ ತುಲನಾತ್ಮಕವಾಗಿ ಅನ್ವೇಷಿಸದ ಪ್ರದೇಶದಲ್ಲಿ ಇಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.