75 ವರ್ಷಗಳ ಹಿಂದೆ ಈ ದಿನ
ಭೂತ ಉಚ್ಚಾಟನೆಗೆ ರಣ ಚಿಕಿತ್ಸೆ
ಜಮ್ಮು, ಜೂನ್ 18– ಜಮ್ಮುವಿನ ಮಂತ್ರವೈದ್ಯರು ಭೂತ– ಪಿಶಾಚಿಗಳ ಉಚ್ಚಾಟನಾ ಚಿಕಿತ್ಸಾಲಯವೊಂದನ್ನು ತೆರೆದಿದ್ದಾರೆ. ದೆವ್ವ ಬಿಟ್ಟು ಹೋಯಿತೆಂದು ಚಿಕಿತ್ಸಕರು ಸಾರುವವರೆಗೂ, ರೋಗಿಗಳನ್ನು ಮಣ್ಣಿನ ಮಡಕೆ ಮೇಲೆ ಕೂರಿಸಿ, ದಿನವೆಲ್ಲ ಬುಗುರಿಯಂತೆ ತಿರುಗಿಸಲಾಗುವುದು. ಈ ಚಿಕಿತ್ಸಾ ಕಾಲದಲ್ಲಿ ಚಿತ್ರಹಿಂಸೆಗೆ ಒಳಗಾಗುವವರು, ಆ ಶರೀರದಲ್ಲಿ ಅಡಗಿ ಕುಳಿತಿರುವ ದೆವ್ವವೇ ಹೊರತು ಮಾನವ ಶರೀರವಲ್ಲ ಎಂದು ಈ ಮಾಂತ್ರಿಕರ ನಂಬುಗೆ.
ದಕ್ಷಿಣ ಆಫ್ರಿಕಾಕ್ಕೆ ಕಾಮನ್ವೆಲ್ತಿನಲ್ಲಿ ಸ್ಥಾನ ಸಲ್ಲದು
ಜೊಹಾನ್ಸ್‌ಬರ್ಗ್, ಜೂನ್ 18– ತನ್ನ ಧೋರಣೆಯನ್ನು ಬದಲಿಸಿ, ಬಿಳಿಯರಲ್ಲದ ಜನರ ಮೇಲೆ ಎಸಗುತ್ತಿರುವ ಅನ್ಯಾಯಗಳನ್ನು ತಪ್ಪಿಸಿ, ತಿದ್ದಿಕೊಳ್ಳದಿದ್ದರೆ, ದಕ್ಷಿಣ ಆಫ್ರಿಕಾವನ್ನು ಕಾಮನ್ವೆಲ್ತ್ ರಾಷ್ಟ್ರ ಕೂಟದಿಂದ ಹೊರದೂಡಬೇಕೆಂದು ಟ್ರಾನ್ಸ್‌ವಾಲ್ ಭಾರತೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಕಾಮನ್ವೆಲ್ತ್ ದೇಶಗಳ ಎಲ್ಲಾ ಪ್ರಧಾನಿಗಳಿಗೂ ತಂತಿ ಕಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.