ದೆಹಲಿ ಒಪ್ಪಂದ ಆಶ್ಚರ್ಯವಾಗಿ ಪರಿಣಮಿಸಿದೆ
ಕಲ್ಕತ್ತ, ಜೂನ್ 16– ‘ನಾವಿಂದು ವ್ಯವಹರಿಸುತ್ತಿರುವ ಭಾರತ– ಪಾಕ್ ಬಿಕ್ಕಟ್ಟಿನ ವ್ಯಾಧಿಯು ಗುಣ ಹೊಂದುವಂತಹದೆಂಬ ಬಗ್ಗೆ ಭರವಸೆ ಯಿದೆ. ಬಿಕ್ಕಟ್ಟು ಪರಿಹಾರವಾಯಿ ತೆಂದೂ ಪರಿಸ್ಥಿತಿಯೂ ಪೂರ್ಣ ಹತೋಟಿಗೆ ಬಂದಿದೆಯೆಂದೂ ನನಗೆ ದೃಢ ನಂಬಿಕೆಯಿದೆ’ ಎಂಬುದಾಗಿ ಪಾಕಿಸ್ತಾನದ ಅಲ್ಪಸಂಖ್ಯಾತ ಸಚಿವ ಡಾ. ಮಲ್ಲಿಕ್ ಅವರು ತಮ್ಮ ರೇಡಿಯೊ ಭಾಷಣದಲ್ಲಿ ತಿಳಿಸಿದರು.
ದೆಹಲಿಯ ಒಪ್ಪಂದವು ಉಭಯ ರಾಷ್ಟ್ರಗಳ ವಿಚಾರಪರ ನರನಾರಿಯರೆಲ್ಲರ ಮೇಲೆಯೂ ಅಸದೃಶ ಅದ್ಭುತ ಪರಿಣಾಮವನ್ನೆಸಗಿದೆ. ಸಮಸ್ಯೆಯ ಪರಿಹಾರಕ್ಕೆ ಇಂದೊಂದೇ ಅದ್ವಿತೀಯ ಮಾರ್ಗ ಎಂಬುದರ ಪರಿಪೂರ್ಣ ಅರಿವಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.