ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ| ಸೋಮವಾರ 7–9–1970

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 16:16 IST
Last Updated 6 ಸೆಪ್ಟೆಂಬರ್ 2020, 16:16 IST
   

ಪಕ್ಷದಿಂದ 7 ಜನ ಸದಸ್ಯರ ಸಸ್ಪೆಂಡ್‌: ವಿರುದ್ಧ ಮತ ನೀಡಿದುದಕ್ಕಾಗಿ ಪ್ರಧಾನಿ ಆಜ್ಞೆ

ನವದೆಹಲಿ, ಸೆ. 6– ರಾಜಧನ ರದ್ದು ವಿಧೇಯಕ ಕುರಿತು ಪಕ್ಷದ ಸಚೇತಕರ ಆದೇಶ ಉಲ್ಲಂಘಿಸಿದುದಕ್ಕಾಗಿ ಆಡಳಿತ ಕಾಂಗ್ರೆಸ್‌ ಸಂಸತ್‌ ಪಕ್ಷದಿಂದ ಏಳು ಜನರನ್ನು ಸಸ್ಪೆಂಡ್‌ ಮಾಡಲಾಗಿದೆ. ಇವರಲ್ಲಿ ಕೇಂದ್ರದ ಮಾಜಿ ಉಪ ಸಚಿವ ಶ್ರೀ ಭಾನು ಪ್ರಕಾಶ್‌ ಸಿಂಗ್‌ ಅವರೂ ಒಬ್ಬರು.

ಸಂವಿಧಾನದ ತಿದ್ದುಪಡಿ ವಿಧೇಯಕದ ಬಗೆಗೆ ಪಕ್ಷದ ಆದೇಶ ಪಾಲಿಸದೆ ‘ಉದ್ದೇಶಪೂರ್ವಕವಾಗಿ’ ಅದರ ವಿರುದ್ಧ ಮತ ಚಲಾಯಿಸಿದುದಕ್ಕಾಗಿ ಆ ಸದಸ್ಯರಿಗೆ ಬರೆದಿರುವ ಪತ್ರಗಳಲ್ಲಿ ಸಮಜಾಯಿಷಿ ಕೇಳಿ, ಆವರೆಗೆ ಅವರನ್ನು ಸಸ್ಪೆಂಡ್‌ ಮಾಡಿರುವುದಾಗಿಸಂಸತ್‌ ಪಕ್ಷದ ನಾಯಕರಾದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ತಿಳಿಸಿದ್ದಾರೆ.

ADVERTISEMENT

ಮಾಜಿ ರಾಜರ ಮಾನ್ಯತೆ ರದ್ದುಗೊಳಿಸಲು ಕೇಂದ್ರ ಸಂಪುಟದ ನಿರ್ಧಾರ

ನವದೆಹಲಿ, ಸೆ. 6– ಹಿಂದಿನ ಸಂಸ್ಥಾನಗಳ ದೊರೆಗಳಿಗೆ ನೀಡಲಾಗಿದ್ದ ಮಾನ್ಯತೆಯನ್ನು ರದ್ದುಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಮಾನ್ಯತೆ ರದ್ದಾದಾಗ ಅದರ ಜತೆಯಲ್ಲೇ ಮಾಜಿ ಅರಸರ ರಾಜಧನ ಹಾಗೂ ವಿಶೇಷ ಸವಲತ್ತುಗಳೆಲ್ಲ ರದ್ದಾಗುತ್ತವೆ. ಆದರೆ, ಪರಿವರ್ತನೆ ಅವಧಿಯಲ್ಲಿ ಅವರಿಗೆ ಸಲ್ಲಬೇಕಾದ ಭತ್ಯದ ಮೇಲೆ ಈ ನಿರ್ಧಾರದಿಂದ ಯಾವ ಪರಿಣಾಮವೂ ಆಗುವುದಿಲ್ಲವೆಂದು ಬಲ್ಲ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.