ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಮಂಗಳವಾರ, 18–07–1972

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 15:04 IST
Last Updated 17 ಜುಲೈ 2022, 15:04 IST
   

ವರ್ಷಕ್ಕೆ 12,000 ರೂ. ಆದಾಯ ಮೀರಿದವರಿಗೆ ಭೂ ಒಡೆತನ ನಿಷೇಧ: ಸರ್ಕಾರದ ಪರಿಶೀಲನೆ

ಬೆಂಗಳೂರು, ಜುಲೈ 17– ಕೃಷಿಕರಲ್ಲದವರಾಗಿದ್ದು, ವರ್ಷಕ್ಕೆ 12,000 ರೂ. ಅಥವಾ ಅದಕ್ಕಿಂತ ಹೆಚ್ಚಿನ ವರಮಾನ ಇರುವವರಿಗೆ ಜಮೀನು ಇರಕೂಡದೆಂಬ ಕೇಂದ್ರ ಭೂ ಸುಧಾರಣಾ ಸಮಿತಿಯ ಶಿಫಾರಸು ರಾಜ್ಯ ಸರ್ಕಾರದ ತೀವ್ರ ಪರಿಶೀಲನೆಯಲ್ಲಿದೆ.

ವಿಧಾನ ಪರಿಷತ್ತಿನಲ್ಲಿ ಇಂದು ಶ್ರೀ ಎಂ.ವಿ. ವೆಂಕಟಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಶ್ರೀ ಎನ್‌. ಹುಚ್ಚ ಮಾಸ್ತಿ ಗೌಡ ಅವರು, ‘ಕೇಂದ್ರ ಸಮಿತಿಯ ಶಿಫಾರಸುಗಳಲ್ಲಿ ಭೂ ಸುಧಾರಣೆಗೆ ಸಂಬಂಧಿಸಿದಂತೆ ಕುಟುಂಬ ಎಂದರೆ ಗಂಡ, ಹೆಂಡತಿ ಮತ್ತು ಮೂರು ಮಂದಿ ಅಪ್ರಾಯಸ್ಥ ಮಕ್ಕಳು ಎಂದು ವಿವರಣೆ ನೀಡಲಾಗಿದೆ. ಅದಕ್ಕಿಂತ ಹೆಚ್ಚು ಜನ ಇದ್ದರೆ ಆ ಕುಟುಂಬಕ್ಕೆ ಭೂ ಮಿತಿಯ ಎರಡರಷ್ಟು ಜಮೀನನ್ನು ಒದಗಿಸಬಹುದೆಂದು ಸೂಚಿಸಲಾಗಿದೆ’ ಎಂದರು.

ADVERTISEMENT

l 623 ಕೋಟಿ ರೂ.ಗಳ ವರ್ಷದ ವೆಚ್ಚಕ್ಕೆ ವಿಧಾನಸಭೆ ಸಮ್ಮತಿ

ಬೆಂಗಳೂರು, ಜುಲೈ 17– ಮೂರು ವಾರಗಳ ಚರ್ಚೆಯ ನಂತರ, ಸುಮಾರು 623 ಕೋಟಿ ರೂ.ಗಳ ವರ್ಷದ ವೆಚ್ಚಕ್ಕೆ ವಿಧಾನಸಭೆ ಇಂದು ಸರ್ಕಾರಕ್ಕೆ ಸಮ್ಮತಿ ನೀಡಿತು.

ಹಣ ವಿನಿಯೋಗ ವಿಧೇಯಕದ ಮೇಲೆ ನಡೆದ ಸುಮಾರು ಎರಡು ಗಂಟೆ ಕಾಲದ ಚರ್ಚೆ ಉತ್ತರ ನೀಡಿದೆ. ಅರ್ಥ ಸಚಿವ ಶ್ರೀ ಎಂ.ವೈ. ಘೋರ್ಪಡೆ ಅವರು, ‘ಜನ ಕಲ್ಯಾಣದ ಶುದ್ಧ ಆರ್ಥಿಕ ದೃಷ್ಟಿಯಿಂದ ಹಣ ವಿನಿಯೋಗವಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.