ಪಂಜಾಬ್‌ನಲ್ಲಿ ಪಾಕ್ ಅತಿಕ್ರಮಣ: 3 ಸಾವು
ಚಂಡೀಘಡ, ಮೇ 21– ಪಂಜಾಬಿನ ಖಾಲ್ರಾ ವಿಭಾಗದಲ್ಲಿ ಇಂದು ಮತ್ತು ನಿನ್ನೆ ಪಾಕಿಸ್ತಾನಿ ಸೈನಿಕರು ಏಕಪ್ರಕಾರವಾಗಿ ನಡೆಸಿದ ಕದನ ವಿರಾಮ ಉಲ್ಲಂಘನೆಗಳಲ್ಲಿ ಇಬ್ಬರು ಪಾಕಿಸ್ತಾನಿ ಸೈನಿಕರು ಮತ್ತು ನಮ್ಮ ಗಡಿ ಭದ್ರತಾ ಪಡೆಯ ಒಬ್ಬ ಯೋಧ ಮೃತಪಟ್ಟಿದ್ದಾರೆ ಪಾಕಿಸ್ತಾನಿ ಸೈನ್ಯ ಪಹರೆ ದಳಗಳು ನಿನ್ನೆ ಈ ವಿಭಾಗದಲ್ಲಿ 2 ಭಾರಿ ಅತಿಕ್ರಮಣ ನಡೆಸಿದವು. ಆಗ ಅವರಿಗೆ ವಾಪಾಸು ಹೋಗುವಂತೆ ಹೇಳಲಾಯಿತು. ಆದರೆ ಹಿಂತಿರುಗಲು ನಿರಾಕರಿಸಿದ ಪಾಕಿಸ್ತಾನಿ ಸೈನಿಕರು ಗುಂಡು ಹಾರಿಸಿದರು. ಇದಕ್ಕೆ ಗಡಿ ಭದ್ರತಾ ಪಡೆ ತಕ್ಕ ಉತ್ತರ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.