ಸರ್ಕಾರ ‘ಭಾಗ್ಯ’ದ ಹೆಸರಿನಲ್ಲಿ ದೂರದೃಷ್ಟಿಯಿರದ ಅನೇಕ ಯೋಜನೆಗಳನ್ನು ಜಾರಿಗೆ ತಂದು ಬಡ ಜನರಿಗೆ ತಾತ್ಕಾಲಿಕ ಸಮಾಧಾನ ನೀಡುತ್ತಿದೆ.
ಇಂಥ ‘ಭಾಗ್ಯ’ಗಳ ಗುಣಮಟ್ಟ ದಿನೇ ದಿನೇ ಕುಸಿಯುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಕಾಳು, ಎಣ್ಣೆ, ಉಪ್ಪು; ವಿದ್ಯಾರ್ಥಿಗಳಿಗೆ ವಿತರಿಸಿದ ಶೂ, ಮೊಟ್ಟೆ, ಸೈಕಲ್; ಆಸ್ಪತ್ರೆಗಳಲ್ಲಿ ವಿತರಿಸುವ ಔಷಧಿ, ಆಹಾರ ಸಾಮಗ್ರಿ... ಹೀಗೆ ಎಲ್ಲದರಲ್ಲೂ ಗುಣಮಟ್ಟ ಕುಸಿತ ಆಗುತ್ತಿರುವುದು ಸರಿಯಲ್ಲ. ಜನಪರ ಯೋಜನೆಗಳನ್ನು ಜಾರಿಗೆ ತರುವುದು ಒಳ್ಳೆಯದಾದರೂ ಅವುಗಳ ಅನುಷ್ಠಾನ ಹಳ್ಳಹಿಡಿಯುತ್ತಿರುವುದು ದುರಂತವಲ್ಲವೇ?
ಕೆಲವು ‘ಭಾಗ್ಯ’ಗಳನ್ನು ಹಣ ದೋಚುವ ಸಲುವಾಗಿಯೇ ರೂಪಿಸಲಾಗಿದೆಯೇ ಎಂಬ ಸಂಶಯ ಮೂಡುತ್ತದೆ. ಸರ್ಕಾರ ಎಚ್ಚೆತ್ತುಕೊಂಡು ಗುಣಮಟ್ಟಕ್ಕೆ ಒತ್ತುಕೊಟ್ಟು ಜನರ ಮೆಚ್ಚುಗೆಗೆ ಪಾತ್ರವಾಗುವುದು ಯಾವಾಗ?
-ಅಪ್ಪು ಶಿರೋಳಮಠ, ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.