ADVERTISEMENT

ಅಪಾಯಕಾರಿ ಮರ

ರವಿಕುಮಾರ್
Published 19 ಸೆಪ್ಟೆಂಬರ್ 2011, 19:30 IST
Last Updated 19 ಸೆಪ್ಟೆಂಬರ್ 2011, 19:30 IST

ಬಾಪೂಜಿನಗರ ಬಡಾವಣೆ 4ನೇ ಮುಖ್ಯ ರಸ್ತೆಯಲ್ಲಿರುವ ಮರ ದೊಡ್ಡದಾಗಿ ಬೆಳೆದಿದ್ದು, ಯಾವುದೇ ಕ್ಷಣದಲ್ಲಿ ಬೀಳುವ ಅಪಾಯದಲ್ಲಿದೆ.

ಇತ್ತೀಚಿಗೆ ಧೋ... ಎಂದು ರಭಸದ ಮಳೆ ಸುರಿಯುವಾಗ ಇದರ ಸುತ್ತಮುತ್ತ ಇದ್ದವರು  ಜೀವ ಕೈಯಲ್ಲಿ ಹಿಡಿದುಕೊಂಡಿದ್ದರು. ಈ ಮರದ ಪಕ್ಕ ಹಾಗೂ ಎದುರುಗಡೆ ಹೆಂಚು ಮತ್ತು ಶೀಟ್ ಮನೆಗಳಿವೆ.

ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ವಿಳಂಬ ಮಾಡದೆ ತುರ್ತಾಗಿ ಸ್ಥಳಕ್ಕೆ ಭೇಟಿ ನೀಡಿ ಮರದ ಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಮನವಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.