ADVERTISEMENT

ಅವಕಾಶ ಕೊಡಿ

ದುಂಡಯ್ಯಸ್ವಾಮಿ, ಧಾರವಾಡ.
Published 1 ಸೆಪ್ಟೆಂಬರ್ 2013, 19:59 IST
Last Updated 1 ಸೆಪ್ಟೆಂಬರ್ 2013, 19:59 IST

ರಾಜ್ಯದಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಗಳು ಸೇರಿದಂತೆ ಹಲವಾರು ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗಳಲ್ಲಿ ಕೇವಲ ಗಾಯನ ವಿಷಯದ ಪದವೀಧರರಿಗೆ ಅವಕಾಶ ನೀಡಲಾಗುತ್ತಿದೆ. ನೂರಾರು ಸಂಖ್ಯೆಯಲ್ಲಿರುವ ತಬಲಾ, ಸಿತಾರ ವಿಷಯಗಳ ಪದವೀಧರರು ಕೂಡ ಗಾಯನದ ಮೂಲತತ್ವಗಳನ್ನು ಬಲ್ಲವರೇ ಆಗಿರುತ್ತಾರೆ. ಇವರು ಶಾಲೆಗಳಲ್ಲಿ ಸಂಗೀತದ ಗಾಯನ- ವಾದನಗಳೆರಡನ್ನೂ ಕಲಿಸಬಲ್ಲವರಾಗಿರುತ್ತಾರೆ.

ಆದ್ದರಿಂದ ಮುಖ್ಯಮಂತ್ರಿಯವರು ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯಗಳ ಮಾದರಿಯಲ್ಲಿ ವಾದ್ಯಸಂಗೀತದ ಪದವೀಧರರಿಗೂ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಅವಕಾಶ ನೀಡಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.