ADVERTISEMENT

ಆಟೊ ಚಾಲಕರೂ ಮನುಷ್ಯರು

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಬಹಳಷ್ಟು ಕಡೆ ಆಟೊ ಚಾಲಕರೊಂದಿಗೆ ಸಂಚಾರಿ ಪೋಲಿಸರು ಏರುದನಿಯಲ್ಲಿ ಏಕವಚನದಲ್ಲಿಯೇ ವ್ಯವಹರಿಸಿ, ಅವರ ವೈಯಕ್ತಿಕ ಘನತೆಗೆ ಚ್ಯುತಿಯಾಗುವಂತೆ ವರ್ತಿಸುತ್ತಾರೆ.

ಆಟೊ ಚಾಲಕರು ಅಶಿಸ್ತಿನಿಂದ ನಡೆದುಕೊಳ್ಳುತ್ತಾರೆ ಎಂಬುದು ನಿಜವೇ ಆದರೂ ಅವರೊಂದಿಗೆ ಅವಮಾನಕಾರಿ ರೀತಿಯಲ್ಲಿ ವರ್ತಿಸುವುದು ಸಮಂಜಸವಲ್ಲ. ಪ್ರತಿಯೊಬ್ಬರಿಗೂ ಘನತೆ ಗೌರವದಿಂದ ಬದುಕುವ ಹಕ್ಕಿದೆ. ಇದಕ್ಕೆ ಆಟೊ ಚಾಲಕರೂ ಹೊರತಾಗಿಲ್ಲ.  ಅವರೆಡೆಗೆ ಅನುಕಂಪ ಇಲ್ಲದೆ ಇದ್ದರೂ ಅಗೌರವದಿಂದ ನೋಡುವುದು ಬೇಡ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.