ADVERTISEMENT

ಆಡುವುದೊಂದು, ಮಾಡುವುದೊಂದು

ಕಾಡನೂರು ರಾಮಶೇಷ
Published 14 ಏಪ್ರಿಲ್ 2013, 19:59 IST
Last Updated 14 ಏಪ್ರಿಲ್ 2013, 19:59 IST

ಪ್ರಪಂಚದಲ್ಲಿ 40ಕ್ಕೂ ಹೆಚ್ಚು ರಾಷ್ಟ್ರಗಳು ಕಡ್ಡಾಯ ಮತದಾನ ಕ್ರಮ ಅನುಸರಿಸುತ್ತಿದೆ. ಆದರೆ ಭಾರತದಲ್ಲಿ!? ಪ್ರತಿಬಾರಿ ಚುನಾವಣೆಯಲ್ಲಿ ಶೇಕಡ 50 ರಿಂದ 60 ಮಾತ್ರ ಮತದಾನ ಎನ್ನುವ ಅಂಕಿ ಅಂಶ ಪ್ರಕಟವಾಗುತ್ತದೆ.

ಮತದಾನ ಮಾಡದೆ ಇರುವವರಿಗೆ ಆಧಾರ್, ಪಾನ್, ರೇಷನ್‌ಕಾರ್ಡ್ ಇಲ್ಲ! ಎನ್ನುವ ನಿಯಮ ಬಂದರೆ ಮತದಾನದ ಪ್ರಮಾಣ ಹೆಚ್ಚಬಹುದೆ!? ಮಾಧ್ಯಮಗಳ ಮೂಲಕ ಪ್ರತಿದಿನ ಪ್ರಚಾರ ನೀಡಿದ ನಂತರವು ಪ್ರತಿಬಾರಿ ವಿದ್ಯಾವಂತರಲ್ಲೇ  ಮತದಾನದ ಬಗ್ಗೆ ನಿರಾಸಕ್ತಿ ಹೆಚ್ಚಿರುವುದು ವಿಪರ್ಯಾಸ!

ಹಾಗೆಯೇ ಚುನಾವಣೆ ಪ್ರಣಾಳಿಕೆ, ಪ್ರಚಾರ ಭಾಷಣ, ಸಂದರ್ಶನಗಳಲ್ಲಿ ಮಹಿಳೆಯರ ಅಭಿವೃದ್ಧಿ, ಕುರಿತಂತೆ ರೀಲ್‌ಬಿಡುವ ರಾಜಕೀಯ ಪಕ್ಷಗಳು, ರಾಜಕಾರಣಿಗಳು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಎಷ್ಟು ಮಹಿಳೆಯರಿಗೆ ರಾಜಕಾರಣಿಗಳ ಕುಟುಂಬ ಹಾಗೂ ಅವರ ಸಂಬಂಧಿಕರ ಕುಟುಂಬದ ಮಹಿಳೆಯರನ್ನು ಬಿಟ್ಟು ಸಿನಿಮಾ ನಟಿಯರನ್ನು ಬಿಟ್ಟು ಚುನಾವಣೆ ಟಿಕೆಟ್ ನೀಡಿದೆ!? ಮತಕ್ಕೆ ಮಹಿಳೆ ಬೇಕು! ಟಿಕೆಟ್‌ಗೆ ಮಹಿಳೆ ಬೇಡ!?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT