ADVERTISEMENT

ಇಂದಿರಾನಗರ ಎರಡನೇ ಹಂತದ ಕಡೆಗೆ ನೋಡಿ

Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

ಇಂದಿರಾನಗರ ಎರಡನೇ ಹಂತದಲ್ಲಿ ಮೆಟ್ರೊ ನಿಲ್ದಾಣದ ಬಳಿಯಿರುವ ನಿವೇಶನವೊಂದು (ನಂ. 60, ನಾಲ್ಕನೇ ಅಡ್ಡರಸ್ತೆ) ಅಕ್ಷರಶಃ ತಿಪ್ಪೆಗುಂಡಿಯಾಗಿ ಪರಿವರ್ತಿತವಾಗಿದೆ. ಜತೆಗೆ ಮಲಮೂತ್ರ ವಿಸರ್ಜನೆಗೆ ಬಳಕೆಯಾಗುತ್ತಿದೆ. ಇವೆಲ್ಲದರ ಪರಿಣಾಮ ಇಲ್ಲಿ ನುಸಿ, ಸೊಳ್ಳೆಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.

ಮಳೆ ಬಂದ ನಂತರ ಇಲ್ಲಿನ ಸಮಸ್ಯೆ ಜಾಸ್ತಿಯಾಗಿದೆ. ಕಂಡ ಕಂಡಲ್ಲಿ ಮೂತ್ರ ವಿಸರ್ಜನೆ ಮಾಡುವವರಿಗೆ ದಂಡ ವಿಧಿಸಲು ಮುಂದಾಗಿರುವ ರಾಜ್ಯ ಸರ್ಕಾರ ಇಂತಹ ಖಾಲಿ ನಿವೇಶನಗಳನ್ನು ಮೊದಲು ಖಾಲಿ ಮಾಡಿ ಸಾರ್ವಜನಿಕರು ಸಾಂಕ್ರಾಮಿಕ ರೋಗಮುಕ್ತರಾಗಿ ಬಾಳಲು ಅನುವು ಮಾಡಿಕೊಡಬೇಕಾಗಿದೆ.
-ಸಿ.ಎಂ. ಜಾರ್ಜ್, ಇಂದಿರಾನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT