ADVERTISEMENT

ಇದ್ದೂ ಇಲ್ಲದಂತೆ

ಬಿ.ಎಸ್.ರಮೇಶ್
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

`ನೆಲ ಕಚ್ಚಿರುವ ಚಿತ್ರಮಂದಿರಗಳು~ ಎಂಬ ನನ್ನ ಪತ್ರಕ್ಕೆ ಪ್ರತಿಕ್ರಿಯಿಸಿದ ಎಸ್. ಜಯಸಿಂಹ ಅವರಿಗೆ ವಂದನೆಗಳು. ನಗರದಲ್ಲಿ (ಬೆಂಗಳೂರು) ಇನ್ನೂ ಅಸ್ತಿತ್ವದಲ್ಲಿದ್ದರೂ ಚಿತ್ರಗಳೇ ಪ್ರದರ್ಶನವಾಗದ ಅನೇಕ ಚಿತ್ರಮಂದಿರಗಳಿವೆ. ಅವುಗಳಲ್ಲಿ ಹೆಸರಿಬಹುದಾದದ್ದು ಪುಟ್ಟಣ್ಣ ಕಣಗಾಲ್ ಚಿತ್ರಮಂದಿರ, ಸುಜಾತ, ಹಿಮಾಲಯ, ಬಿಆರ್‌ವಿ, ಮಾರುತಿ.

ಆದರೂ ಬೆಂಗಳೂರಿಗೆ ಅಲಂಕಾರ ಪ್ರಿಯವಾಗಿದ್ದ ಚಿತ್ರಮಂದಿರಗಳು ಒಂದೊಂದಾಗಿ ನೆಲಸಮವಾಗಿ ಆ ಜಾಗದಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗುತ್ತಿರುವುದು ನೋಡಿ ಏನು ಹೇಳುವುದೋ ತಿಳಿಯದಾಗಿದೆ. ಇನ್ನೊಂದೆಡೆ ಮಾಲ್‌ಗಳಲ್ಲಿನ ಮಲ್ಪಿಪ್ಲೆಕ್ಸ್ ಚಿತ್ರ ಮಂದಿರಗಳಿಗೆ 200 ರಿಂದ 500 ರೂ. ಕೊಟ್ಟು ಸಿನಿಮಾ ವೀಕ್ಷಿಸಬೇಕಿದೆ. ಹೀಗಾದರೆ ಮಧ್ಯಮ ವರ್ಗ, ಬಡವರ ಪಾಡೇನು?

ಮಾಲ್‌ಗಳೂ ಹೀಗಾಗಿ ಮಧ್ಯಮವರ್ಗದ ಜನ ಸಿನಿಮಾ ನೋಡುವುದೇ ಈಗ ಕನಸು ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.