ADVERTISEMENT

ಈ ರೀತಿಯ ಪರಿಸರ ದಿನಾಚರಣೆ ಬೇಕೆ?

ಸುಘೋಷ್ ಎಸ್.ನಿಗಳೆ, ಬೆಂಗಳೂರು
Published 5 ಜೂನ್ 2014, 19:30 IST
Last Updated 5 ಜೂನ್ 2014, 19:30 IST

‘ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬೈಕ್ ರ್‍ಯಾಲಿ’ (ಪ್ರ.ವಾ.  ಜೂನ್ 5) ಓದಿ ವಿಷಾದವೆನಿಸಿತು.  ಜನಸಂಖ್ಯಾ ಸ್ಫೋಟದಿಂದಾಗಿ ಈಗಾಗಲೇ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅಗತ್ಯಕ್ಕಿಂತ ಹೆಚ್ಚು ಒತ್ತಡವಿರುವುದು ಸರ್ವವಿದಿತ. ಅದರಲ್ಲೂ ಇಂಧನ ಮೂಲಗಳಾದ ಪೆಟ್ರೋಲ್ ಮತ್ತು ಡೀಸೆಲ್‌ನ ಅತಿ ಬಳಕೆಯಿಂದ ಆಗುತ್ತಿರುವ ಪರಿಸರ ಮಾಲಿನ್ಯವಂತೂ ಹೇಳತೀರದು.

ಬೆಂಗಳೂರು ಸೇರಿದಂತೆ ವಿಶ್ವದ ಮಹಾನಗರಗಳಲ್ಲಿ ವಾಹನಗಳಿಂದಾಗುವ ವಾಯು ಮಾಲಿನ್ಯ ಅಪಾಯದ ಮಟ್ಟವನ್ನು ಮೀರಿದೆ ಎಂದು ಹಲವಾರು ಸಮೀಕ್ಷೆಗಳು ಹೇಳಿವೆ. ಅಷ್ಟೇ ಅಲ್ಲ, ಅತಿಯಾದ ತೈಲ ಆಮದಿನಿಂದ ದೇಶದ ಬೊಕ್ಕಸಕ್ಕಾಗುತ್ತಿರುವ ನಷ್ಟ ದಿನೇ ದಿನೇ ಹೆಚ್ಚುತ್ತಿದೆ. ಇಷ್ಟೆಲ್ಲ ಇರಬೇಕಾದರೆ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ರಕ್ಷಣೆಗಾಗಿ ಬೈಕ್ ರ್‍ಯಾಲಿ ಆಯೋಜಿಸುವ ಉದ್ದೇಶವಾದರೂ ಏನು? ಅದೂ ಅರಣ್ಯ ಭಾಗಗಳಲ್ಲಿ   1800 ಕಿ.ಮೀ. ಸಂಚರಿಸಲಾಗುವುದು ಎಂದು ಭಾರತೀಯ ಸಾಹಸ ಕ್ರೀಡಾ ಸಂಸ್ಥೆ ಹೇಳಿದೆ. ಇಷ್ಟೊಂದು ಬೈಕ್‌ಗಳು‌ಕಾಡಿನಲ್ಲಿ ಒಟ್ಟಿಗೆ ಸಾಗಿದರೆ ಉರಿಯುವ ಪೆಟ್ರೋಲ್ ಎಷ್ಟು?  ಅರಣ್ಯಪ್ರದೇಶದಲ್ಲಿ ಆಗುವ ವಾಯುಮಾಲಿನ್ಯ ಎಷ್ಟು? ಹೋಗಲಿ, ಈ ರ್‍ಯಾಲಿಯಿಂದ ಅದ್ಯಾವ ವನ್ಯಜೀವಿಗಳು ಉಳಿಯುತ್ತವೆಯೋ ದೇವರೇ ಬಲ್ಲ. ಇದರ ಬದಲಾಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡುವ ಪ್ರಯತ್ನಕ್ಕೆ ಸಂಘಟನೆಗಳು ಮುಂದಾಗಲಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.