ADVERTISEMENT

ಉತ್ತಮ ಮನರಂಜನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 19:30 IST
Last Updated 2 ಜುಲೈ 2012, 19:30 IST

ಅತ್ಯಂತ ಶಿಸ್ತಿನ ಪಕ್ಷವೆಂದು ಬಿಜೆಪಿಯನ್ನು ಗೆಲ್ಲಿಸಿ ಕಳುಹಿಸಿದ ಕನ್ನಡಿಗರಿಗೆ ಸರ್ಕಾರ ಬಂದಾಗಿನಿಂದ ಅಭೂತ ಪೂರ್ವ ಮನರಂಜನೆಯನ್ನು ಒದಗಿಸುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ಧನ್ಯವಾದಗಳು.

ರಾಜ್ಯದಲ್ಲಿ ಬರಗಾಲ ಬಂದು ಕುಡಿಯುವ ನೀರು, ವಿದ್ಯುತ್ ಸಮಸ್ಯೆ, ದನಕರುಗಳಿಗೆ ಮೇವಿನ ಸಮಸ್ಯೆ, ಪಡಿತರ ಸಮಸ್ಯೆ  ಕಾಡುತ್ತಿದ್ದರೂ ಆ ಸಮಸ್ಯೆಗಳನ್ನೆಲ್ಲಾ ಮರೆಯುವಂತೆ ಮಾಡಿ ಜನತೆಗೆ ಅತ್ಯುತ್ತಮ ಮನರಂಜನೆ ನೀಡುತ್ತಿದ್ದಾರೆ. 

ಮನರಂಜನೆ ಒದಗಿಸಿದ ಬಿಜೆಪಿಗೆ ಹಾಗೂ ಪದೇಪದೇ ಎದುರಾದ ಉಪಚುನಾವಣೆ ಗಳಲ್ಲಿ  ಬಿಜೆಪಿಯನ್ನು ಗೆಲ್ಲಿಸಿ ಪ್ರೊತ್ಸಾಹಿಸಿದ  ಪ್ರಜ್ಞಾವಂತ ಮತದಾರ ಪ್ರಭುಗಳಿಗೆ ಜಯವಾಗಲಿ ಎಂದು ಹಾರೈಸೊಣ. 

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.