ADVERTISEMENT

ಊಟ ಕನಿಷ್ಠವಲ್ಲ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 19:30 IST
Last Updated 30 ಅಕ್ಟೋಬರ್ 2017, 19:30 IST

ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ಮೀನೂಟ’ ಮಾಡಿ ಧರ್ಮಸ್ಥಳಕ್ಕೆ ಭೇಟಿ ಕೊಟ್ಟದ್ದು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಉಪವಾಸ ಇದ್ದು’ ಮಂಜುನಾಥನ ದರ್ಶನ ಪಡೆದದ್ದನ್ನು ಬಿಜೆಪಿ ನಾಯಕರು ಅವರಿಬ್ಬರ ಸಂಸ್ಕೃತಿಯ ವ್ಯತ್ಯಾಸಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ.

ದೇವರಿಗೆ ಮುಖ್ಯವಾಗಿ ಬೇಕಾಗಿರುವುದು ಚಿತ್ತಶುದ್ಧಿ. ಇದು ಉಪವಾಸದಿಂದ ಬರಬೇಕೆಂದೇನೂ ಇಲ್ಲ. ‘ಉಂಡು ಉಪವಾಸಿ; ಬಳಸಿ ಬ್ರಹ್ಮಚಾರಿ’ ಎಂದು ಶರಣರೇ ಹೇಳಿದ್ದಾರೆ! ಹೀಗಾಗಿ ಉಪವಾಸ ಶ್ರೇಷ್ಠವೂ ಅಲ್ಲ, ಊಟ ಮಾಡುವುದು ಕನಿಷ್ಠವೂ ಅಲ್ಲ.
–ಶಿವಕುಮಾರ ಬಂಡೋಳಿ,
ಹುಣಸಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT