ADVERTISEMENT

ಐಪಿಎಲ್‌ನಿಂದ ಭಾರತದ ಮಾನ ಹರಾಜು?

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 19:59 IST
Last Updated 11 ಜೂನ್ 2013, 19:59 IST

ಐಪಿಎಲ್ ಫಿಕ್ಸಿಂಗ್ ಪ್ರಕರಣಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜಾಗಿದೆ. ಈ ಮೂಲಕ ಅದು, ಈ ಹಿಂದೆ ಮತ್ತು ಈಗಲೂ ಭಾರತದ ಮಾನ ಕಳೆಯುತ್ತಿರುವ ಯುಪಿಎ- 2 ಭ್ರಷ್ಟಾಚಾರ ಮರೆಸುವಂತೆ ಮಾಡಿದೆ. ಕ್ರಿಕೆಟಿಗರು ಹಾಗೂ ಐಪಿಎಲ್ ತಂಡಗಳ ಮಾಲೀಕರು ಹಣ ಮಾಡಿಕೊಳ್ಳುವುದಕ್ಕೆ ದೇಶದ ಮಾನ ಹರಾಜು ಹಾಕುವುದು ಎಷ್ಟು ಸರಿ?

ಅವರು ನಡೆಸುವ ದಂಧೆಗೆ ಇಂಡಿಯನ್ ಪ್ರಿಮಿಯರ್ ಲೀಗ್ ಎಂಬ ಹೆಸರು ಕೊಟ್ಟು `ಭಾರತ ಮಾತೆಯ' ಮಾನ ಹರಾಜು ಹಾಕಬಹುದೆ?! ಇಷ್ಟೆಲ್ಲ ಹಗರಣಗಳು ಆದಮೇಲೂ ಐಪಿಎಲ್ ಅನ್ನು ಮುಂದುವರೆಸುವುದು ಸೂಕ್ತವಲ್ಲ.  -ಎಚ್.ಕೆ. ಮಣಿಕಂಠ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.