ADVERTISEMENT

ಕಾಡಾನೆಗಳ ಹಾವಳಿ ತಪ್ಪಿಸಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

 ಮಾಗಡಿ ತಾಲ್ಲೂಕಿನ ಪೋಲೋಹಳ್ಳಿ ಸುತ್ತಮುತ್ತ ಕಳೆದ ಒಂದು ವರ್ಷದ ಅವಧಿಯಲ್ಲಿ  ಹತ್ತಕ್ಕೂ ಹೆಚ್ಚು ಸಲ ಆನೆಗಳು ರೈತರ ಜಮೀನಿಗೆ ನುಗ್ಗಿ ಬೆಳೆಗಳನ್ನು ನಾಶಮಾಡಿವೆ.

ಹದಿನೈದು ವರ್ಷಗಳಿಂದ ಬೆಳೆಸಿದ ಫಲ ಬಿಡುವ ತೆಂಗಿನ ಮರಗಳನ್ನೂ ಬೇರು ಸಹಿತ ಕಿತ್ತು ಹಾಕಿವೆ.

 ಪೋಲೋಹಳ್ಳಿ ಗ್ರಾಮದ ರೈತರು ಬೆಳೆದ ಬಾಳೆ ಮತ್ತು ಪಪ್ಪಾಯಿ ಬೆಳೆಯೂ ನಾಶವಾಗಿದೆ. ಅನೇಕ ರೈತರು ಆನೆಗಳಿಗೆ ಬಲಿಯಾಗುವುದು ತಪ್ಪಿದೆ. ಆನೆಗಳ ಹಾವಳಿಗೆ ಹೆದರಿ ರೈತರು ನೀರಾವರಿ ಬೆಳೆಗಳನ್ನು  ಬೆಳೆಯುವುದನ್ನೇ ಕೈಬಿಟ್ಟಿದ್ದಾರೆ.
 
ಬೆಳೆ ರಕ್ಷಿಸಿಕೊಳ್ಳಲು ರಾತ್ರಿ ವೇಳೆ ನಿದ್ದೆಗೆಟ್ಟು ಹೊಲಗಳಲ್ಲೇ ಕಳೆಯುವಂತಾಗಿದೆ. ಆನೆಗಳ ಹಾವಳಿಯಿಂದ ತಾಲ್ಲೂಕಿನ ರೈತರಿಗೆ ಆಗಿರುವ ನಷ್ಟವನ್ನು ಕುರಿತು ಸರ್ಕಾರ ಅಧ್ಯಯನ ಮಾಡಿ ನಷ್ಟಕ್ಕೆ ತುತ್ತಾಗಿರುವ ರೈತರಿಗೆ ಪರಿಹಾರ ಕೊಡಬೇಕು.
 
ಆನೆಗಳ ಹಾವಳಿಯನ್ನು ತಡೆಯಲು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ತಾಲ್ಲೂಕಿನ ರೈತರ ಪರವಾಗಿ  ವಿನಂತಿಸುತ್ತೇವೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.