ADVERTISEMENT

ಕೈಚೆಲ್ಲಿದರೆ ಹೇಗೆ?

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 19:30 IST
Last Updated 5 ಮಾರ್ಚ್ 2018, 19:30 IST

ಮದ್ಯ ಮಾರಾಟ ನಿಷೇಧದಿಂದ ಮಾಫಿಯಾ ಸೃಷ್ಟಿಯಾಗುತ್ತದೆ ಎಂದಿದ್ದಾರೆ (ಪ್ರ.ವಾ., ಮಾ.2) ಹೊಸ ರಾಜಕಾರಣಿ ಹಾಗೂ ಅನುಭವೀ ನಟ ಕಮಲ್‌ ಹಾಸನ್. ಅವರ ಮಾತಿನಲ್ಲಿ ನಿಜಾಂಶ ಇದೆ. ಇದು ಕೂಡ ಬಹಳ ಹಳೆಯ ಸಮಸ್ಯೆಯೇ. ಹಾಗಂತ ಮದ್ಯ ಮಾರಾಟ ನಿಷೇಧಿಸದಿದ್ದರೆ ಆಗುವ ಅನಾಹುತಗಳ ಬಗ್ಗೆ ಎಚ್ಚರವಿರದಿದ್ದರೆ ಹೇಗೆ?

ವಾಹನ ಅಪಘಾತಗಳಿಗೆ ಕುಡಿತ ಕೂಡ ಒಂದು ಪ್ರಧಾನ ಕಾರಣ. ಯುವ ಪೀಳಿಗೆಯು ಕುಡಿತದ ವ್ಯಸನ ಅಂಟಿಸಿಕೊಳ್ಳುತ್ತಿರುವ ಅಪಾಯ ಕಣ್ಣೆದುರಿಗೆ ಇದೆ. ಅದರಿಂದ ಆಗುತ್ತಿರುವ ಕೌಟುಂಬಿಕ ಸಮಸ್ಯೆಗಳ ನರಕವನ್ನು ಬಣ್ಣಿಸಲಾದೀತೇ? ಮದ್ಯದ ಹಾವಳಿಯ ದುಷ್ಪರಿಣಾಮಗಳು ಹಲವು ಬಗೆಯವು.

ಚುನಾವಣೆಗಳ ಮೇಲೂ ಮದ್ಯ ಪ್ರಭಾವ ಬೀರತೊಡಗಿದೆ. ಈ ಪ್ರಭಾವ, ಪ್ರಜಾಪ್ರಭುತ್ವದ ಆಶಯಕ್ಕೆ ಕುಂದು ತರುವ ಮಟ್ಟಿಗೆ ಹೆಚ್ಚಿದೆ. ಸಮಾಜಕ್ಕೆ ಏನಾದರೂ ಒಳಿತು ಮಾಡಬೇಕು ಎಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದಿರುವ ಕಮಲ್ ಹಾಸನ್‌ ಅಂಥವರು ಹೀಗೆ ಅಸಹಾಯಕರಾಗಿ ಕೈ ಚೆಲ್ಲುವುದು ಸರಿಯೇ?

ADVERTISEMENT

–ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.