ಚುನಾಯಿತ ಪ್ರತಿನಿಧಿಗಳು ಜನರ ನಿರೀಕ್ಷೆಗಳಿಗೆ ತಕ್ಕಂತೆ ವರ್ತಿಸದಿದ್ದರೆ ಅವರಿಗೆ ಉಳಿಗಾಲವಿಲ್ಲ ಎನ್ನುವುದಕ್ಕೆ ಒಡಿಶಾದ ಬಿಜೆಡಿ ಪಕ್ಷದ ಶಾಸಕ ಜಿನಾ ಹಿಕಾಕ ಉತ್ತಮ ಉದಾಹರಣೆ. ಹಿಕಾಕ ಜನರ ಹಿತಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದರು ಎಂಬ ಆರೋಪಗಳಿದ್ದವು.
ಅವರನ್ನು ಮಾವೊವಾದಿಗಳು ಅಪಹರಿಸಿ ವಿಚಾರಣೆ ನಡೆಸಿ, ಅವರಿಂದ ಪಕ್ಷಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ವಾಗ್ದಾನ ಪಡೆದುಕೊಂಡು ಬಿಡುಗಡೆ ಮಾಡಿದ್ದಾರೆ. ಈ ಕೃತ್ಯಗಳು ಜನತಂತ್ರ ವ್ಯವಸ್ಥೆಗೆ ವಿರುದ್ಧವಾದರೂ ಜನ ಹಿತ ಮರೆತ ಚುನಾಯಿತ ಪ್ರತಿನಿಧಿಗಳಿಗೆ ಎಚ್ಚರಿಕೆಯ ಪಾಠವಾಗಿದೆ.
ಹಿಕಾಕ ಪ್ರಕರಣದಿಂದ ದೇಶದ ಚುನಾಯಿತ ಪ್ರತಿನಿಧಿಗಳು ಪಾಠ ಕಲಿಯಬೇಕು. ಒಮ್ಮೆ ಆಯ್ಕೆಯಾದ ನಂತರ ಐದು ವರ್ಷಗಳ ಕಾಲ ಅಧಿಕಾರ ಅನುಭವಿಸಿ, ಅಕ್ರಮವಾಗಿ ಹಣ ಮಾಡಿಕೊಂಡು ಮನೆಯಲ್ಲಿ ಕುಳಿತು ಬಿಡುವ ರಾಜಕಾರಣಿಗಳಿಗೆ ಬುದ್ದಿ ಕಲಿಸುವುದು ಹೇಗೆ ಎಂಬುದು ಜನರಿಗೆ ಗೊತ್ತಿರಲಿಲ್ಲ. ಒಡಿಶಾದ ಮಾವೊವಾದಿಗಳು ಅದನ್ನು ದೇಶದ ಜನರಿಗೆ ತೋರಿಸಿಕೊಟ್ಟಿದ್ದಾರೆ ಎಂದು ಈ ಪ್ರಕರಣವನ್ನು ಅರ್ಥೈಸಬಹುದೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.