ADVERTISEMENT

ಜೋತಿಷ್ಯ: ಏಕೆ ಅಸಹನೆ?

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 19:30 IST
Last Updated 19 ಜುಲೈ 2012, 19:30 IST

ಜುಲೈ 16ರ  ಸಂಗತದಲ್ಲಿ  `ತಲೆಚಿಟ್ಟು ಹಿಡಿಸುವ ಭವಿಷ್ಯಕಾರರು~  ಎಂಬ ಪತ್ರಕ್ಕೆ ನನ್ನ ಉತ್ತರ: ಶ್ರಿಮತಿ ಅನುರಾಧರವರು ಜೋತಿಷ್ಯಶಾಸ್ತ್ರವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಬರೆದಂತಿದೆ.

ಜೋತಿಷ್ಯ ಎಂದರೆ ಭೂಮಿಯ ಮೇಲೆ ಸಂಭವಿಸುವ  ಪ್ರಾಕೃತಿಕ ಘಟನೆಗಳಾದ ಹವಾಮಾನ, ಪ್ರವಾಹ, ಭೂಕಂಪ, ಜ್ವಾಲಾಮುಖಿಯನ್ನು ಮುಂಚಿತವಾಗಿ ತಿಳಿಯುವುದು. ಹಾಗೂ ಮನುಷ್ಯನ ನಡವಳಿಕೆಗಳನ್ನು ತಿಳಿಯುವುದೇ ಆಗಿದೆ. ಈ ಶಾಸ್ತ್ರವು ಕಾಲಗರ್ಭದಲ್ಲಿ ಅಡಗಿರುವುದನ್ನು ತಿಳಿಯಪಡಿಸಿ ಮಾನವನಿಗೂ ಹಾಗೂ ನಿಸರ್ಗ ವ್ಯವಸ್ಥೆಗೂ ಇರುವ ಸಂಬಂಧಗಳನ್ನು ಮುಂಚಿತವಾಗಿ ತಿಳಿಸುತ್ತದೆ.

ಜನಗಳಿಗೆ ಇದರ ಬಗ್ಗೆ ನಂಬಿಕೆಯಿರುವುದರಿಂದಲೇ ಟಿವಿಗಳಲ್ಲಿ ನಿತ್ಯ ಕೆಲವು ಸಮಯ ಇದಕ್ಕಾಗಿ ಮೀಸಲಿಡಲಾಗಿದೆ. ಪತ್ರಿಕೆಗಳಲ್ಲೂ ಭವಿಷ್ಯ ಪ್ರಕಟವಾಗುತ್ತದೆ. ಜೋತಿಷ್ಯ ಎನ್ನುವುದು ಭಾರತೀಯ ಸಂಸ್ಕೃತಿಗೆ ಮಾತ್ರ ಸೀಮಿತವಾಗಿಲ್ಲ.ಪ್ರಪಂಚದ ಎಲ್ಲಾ ದೇಶಗಳ ಎಲ್ಲಾ ಧರ್ಮಗಳಲ್ಲೂ ಇದು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.