ADVERTISEMENT

ತೆರವಾದ ತಳ್ಳುಗಾಡಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ವಾಲ್ಮೀಕಿ ನಗರದ 2ನೇ ಮುಖ್ಯ ರಸ್ತೆ ಫುಟ್‌ಪಾತ್ ಮೇಲೆ ವ್ಯಾಪಾರ ವ್ಯವಹಾರ ನಡೆಸುತ್ತಿದ್ದ ತಳ್ಳುಗಾಡಿಯಿಂದ ಆಗುತ್ತಿರುವ ತೊಂದರೆ ಬಗ್ಗೆ ಇಲ್ಲಿನ ನಿವಾಸಿಗಳಾದ ನಾವು ಬರೆದ ಪತ್ರ ಪ್ರಜಾವಾಣಿ ಮೆಟ್ರೊದಲ್ಲಿ ಪ್ರಕಟವಾಗಿತ್ತು.
 
ಅದನ್ನು ಓದಿದ ಇಲ್ಲಿನ ಪೊಲೀಸ್ ಅಧಿಕಾರಿಗಳು ಕೂಡಲೆ ಕ್ರಮ ಜರುಗಿಸಿ ಫುಟ್‌ಪಾತ್‌ನ ಮೇಲೆ ನಿಲ್ಲಿಸಿದ್ದ 4 ಚಕ್ರದ ತಳ್ಳುಗಾಡಿಯನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ.

ಇದರಿಂದಾಗಿ ನಮ್ಮ ದೊಡ್ಡ ಸಮಸ್ಯೆ ನಿವಾರಣೆಯಾಗಿದೆ. ಅದಕ್ಕಾಗಿ ಪತ್ರಿಕೆಗೆ ಮತ್ತು ಪೊಲೀಸರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ಈ ಭಾಗದಲ್ಲಿ ರೌಡಿಗಳ ಹಾವಳಿಯಿದೆ. ಅದನ್ನು ಕೂಡಾ ಪೊಲೀಸ್ ಅಧಿಕಾರಿಗಳು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಲು ವಿನಂತಿ.
 -ನಿವಾಸಿಗಳು

ಪಾರ್ಕಿಂಗ್ ಶುಲ್ಕ ಸರಿ

ಮನೆ ಎದುರಿನ ರಸ್ತೆ, ಕಾಲುದಾರಿಯಲ್ಲಿ ಕಾರು ಪಾರ್ಕಿಂಗ್‌ಗೆ ಮಾಸಿಕ 50 ರೂ. ಶುಲ್ಕ ವಿಧಿಸಲು ಬಿಬಿಎಂಪಿಯ ಚಿಂತನೆ ಮತ್ತು ಇದಕ್ಕೆ ಕೆಲ ನಾಗರಿಕರ ವಿರೋಧದ ಬಗ್ಗೆ ಈ ಪತ್ರ.

ಮನೆ ಮುಂದಿನ ಸಾರ್ವಜನಿಕ ರಸ್ತೆ ಮತ್ತು ಫುಟ್‌ಪಾತ್ ತಮ್ಮ ಸ್ವಂತ ಆಸ್ತಿ ಎಂದು ಅನೇಕರು ತಿಳಿದಿದ್ದಾರೆ. ಅಕ್ಕಪಕ್ಕದ ಮನೆಯವರ ಕಾರುಗಳನ್ನು ನಿಲ್ಲಿಸಲು ಬಿಡುವುದಿಲ್ಲ. ಈ ವಿಷಯದಲ್ಲಿ ಹಲವಾರು ಕಡೆ ಜಗಳ ಹೊಡೆದಾಟವೂ ನಡೆದಿದೆ.

ಹೀಗಿರುವಾಗ ಲಕ್ಷಾಂತರ ರೂಪಾಯಿ ತೆತ್ತು ಕಾರು ಖರೀದಿಸುವ, ತಿಂಗಳಿಗೆ ಸಾವಿರಾರು ರೂ. ಇಂಧನಕ್ಕೆ ಸುರಿಯುವ ಶ್ರಿಮಂತರು ಪಾಲಿಕೆಗೆ ತಿಂಗಳಿಗೆ ಕೇವಲ 50 ರೂ. ಪಾರ್ಕಿಂಗ್ ಶುಲ್ಕ ಕೊಡಲು ವಿರೋಧಿಸುವುದು ಆಶ್ಚರ್ಯವಾಗಿದೆ.

ಯಾರ ತಂಟೆ ತಕರಾರಿಗೂ ಅವಕಾಶ ಇಲ್ಲದೆ ನಾಗರಿಕರೆಲ್ಲರಿಗೂ ಪಾಲಿಕೆ ರಸ್ತೆ-ಕಾಲುದಾರಿಯಲ್ಲಿ ಕಾರು ಪಾರ್ಕಿಂಗ್ ಮಾಡಲು ಅನುಕೂಲವಾಗುವಂತೆ ಪಾರ್ಕಿಂಗ್ ಶುಲ್ಕ ಜಾರಿಗೊಳಿಸುವುದು ಉತ್ತಮ.
-ಸಾಲ್ಯಾನ್ ಪಡುಬಿದ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.