ADVERTISEMENT

ಧನ್ಯವಾದಗಳು ಮಲಾಲಾ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ತನ್ನ 14 ನೇ ವಯಸ್ಸನ್ನು ಕೇವಲ ಆಟ-ಪಾಠಗಳಿಗೆ ಮುಡುಪಾಗಿಡದೆ, ದೇಶದ ಒಳಿತನ್ನು ಬಯಸಿ,ತನ್ನ ದೇಶದ ಹೆಣ್ಣು ಮಕ್ಕಳನ್ನು ಸಾಕ್ಷರತರನ್ನಾಗಿ ಮಾಡಲು ಎದೆಗುಂದದೆ ಮುನ್ನುಗ್ಗಿ  ಪಾಕಿಸ್ತಾನ ಸರ್ಕಾರವನ್ನು ಅಲುಗಾಡಿಸಿದ ನಿಮ್ಮ ಸಾಧನೆಗೆ ತಲೆಬಾಗುವೆ.

ಮಲಾಲಾ ನಿನ್ನ ಸಾಧನೆ ಮತ್ತು ಹೋರಾಟ ಕೇವಲ ಪಾಕಿಸ್ತಾನಕ್ಕೆ ಮೀಸಲಾಗಿಡದೆ ಭಾರತಕ್ಕೂ ಅವಶ್ಯಕವಾಗಿದೆ, ಇಲ್ಲಿಯೂ ಹೇಮಶ್ರೀ ರಂತಹ ಅದೆಷ್ಟೋ ಹೆಣ್ಣು ಮಕ್ಕಳು ತನ್ನ ಗಂಡಂದಿರಿಂದಲೇ ಮಾರಾಟಗೊಂಡು ಜೀವತೆತ್ತ ಕೂಗು ನಿಮ್ಮಂತವರಿಗೆ ಕೇಳಬೇಕಿದೆ, ಇಂತಹ ಕ್ರೌರ್ಯ ಎಸಗುವ ಮತಿಗೆಟ್ಟ ರಾಜಕಾರಣಿಗಳಿಗೆ ಬುದ್ದಿ ಹೇಳಬೇಕಿದೆ. 
    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.