ADVERTISEMENT

ನಗರಗಳಿಗೆ ವಿನಾಯಿತಿಯಿದೆಯೆ?

ಪ್ರೇಮ್‌ಕುಮಾರ್, ಮೈಸೂರು
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST

ಕೆರೆಗಳನ್ನು ಉಳಿಸಿ, ಹೂಳನ್ನು ತೆಗೆದು, ನೀರಿನ ಸಂಗ್ರಹ ಹೆಚ್ಚಿಸಿ, ಕೆರೆಗಳ ಪುನರುಜ್ಜೀವನಗೊಳಿಸಿ, ಅಂತರ್ಜಲ ಮಟ್ಟ ಹೆಚ್ಚಿಸಿ ಇತ್ಯಾದಿ ಘೋಷಣೆಗಳನ್ನು ಸರ್ಕಾರ ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತಿರುತ್ತದೆ. ಇದು ಹಳ್ಳಿಗಳಿಗೆ ಮಾತ್ರ ಅನ್ವಯಿಸುತ್ತದೆಯೇ? ನಗರಗಳಿಗೆ ವಿನಾಯಿತಿಯಿದೆಯೆ? ಅವರಿಗೆ ನೀರಿನ ಕೊರತೆಯಿಲ್ಲವೇ? ಕೊಳವೆ ಬಾವಿಗಳಿಲ್ಲವೇ? ಅಲ್ಲೂ ಅಂತರ್ಜಲ ಹೆಚ್ಚಿಸುವ ಅವಶ್ಯಕತೆ ಇಲ್ಲವೇ? ಹಾಗಾದರೆ ಇರುವ ಕೆರೆಗಳನ್ನು ನಿವೇಶನಗಳಾಗಿ ಪರಿವರ್ತಿಸುವುದೇಕೆ?

ಉದಾಹರಣೆಗೆ, ಮೈಸೂರಿನ ಶಕ್ತಿನಗರ ಬಡಾವಣೆ ಬಳಿ ಒಂದು ಕೆರೆಯಿತ್ತು. ಅದನ್ನು ನಿವೇಶನವಾಗಿ ಪರಿವರ್ತಿಸಲಾಗಿದೆ.

ವಿದ್ಯಾಶಂಕರ ನಗರ ಬಡಾವಣೆಯವರು ಕೊಳವೆ ಬಾವಿ ಅವಲಂಬಿಸಿದ್ದಾರೆ. ಇನ್ನು ಸಿದ್ದಾರ್ಥನಗರದ ಅನ್ನದಾನೇಶ್ವರ ಕ್ಷೇತ್ರದ ಬಳಿ ಇರುವ ಕೆರೆಯನ್ನು ಬತ್ತಿಸಲಾಗಿದೆ. ಸದ್ಯದಲ್ಲಿಯೇ ಅಲ್ಲಿ ಬಹುಮಹಡಿ ಕಟ್ಟಡ ಏಳಬಹುದು. ಕೆರೆ ಮುಚ್ಚಲು ಹಲವಾರು ಕಾರಣಗಳನ್ನು ನೀಡಲಾಗುತ್ತದೆ. ಆದರೆ ಕೆರೆ ಮುಚ್ಚುವುದು ಪರಿಹಾರವೇ? ಅಧಿಕಾರವರ್ಗ, ನಗರ ಸಭೆ ಸದಸ್ಯರಿಗೆ ಚಿಂತಿಸಲು ಸಮಯಾವಕಾಶವಿದೆಯೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.