ರಾಜಾಜಿನಗರ ನವರಂಗ್ ಚಿತ್ರಮಂದಿರದ ವೃತ್ತ ನಾಲ್ಕು ದಿಕ್ಕಿನ ಕೂಡು ರಸ್ತೆಗಳು ಸೇರುವ ಪ್ರದೇಶವಾಗಿದೆ. ಈ ವೃತ್ತದ ಮೂಲಕ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವುದರಿಂದ ದಟ್ಟಣೆ ಹೆಚ್ಚಾಗಿರುತ್ತದೆ. ಆದ್ದರಿಂದ ಜನರು ‘ಫುಟ್‌ಪಾತ್’ ಮೇಲೆ ನಡೆದು ಹೋಗುತ್ತಾರೆ. ಆದರೆ ಈಗ ಫುಟ್‌ಪಾತ್ ಸ್ಥಿತಿ ಕೆಟ್ಟು ಹೋಗಿದೆ.
ಕಲ್ಲುಗಳು ಮೇಲಕ್ಕೆ ಎದ್ದು, ಕೆಲವು ಕಲ್ಲುಗಳು ತಗ್ಗಿ ವಾಲಿವೆ. ಇನ್ನೂ ಹಲವು ಕಡೆ ಹಳ್ಳ, ದಿಣ್ಣೆಗಳಿಂದ ಕೂಡಿದೆ. ಈ ವೃತ್ತಕ್ಕೆ ಸಂಬಂಧಿಸಿದ ನಾಲ್ಕು ಕಡೆಯ ‘ಫುಟ್‌ಪಾತ್’ ಅನ್ನು ಸರಿಪಡಿಸುವುದರ ಮೂಲಕ ನಿತ್ಯ ಓಡಾಡುವ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.