ಕಸ್ತೂರಬಾ ರಸ್ತೆಯಲ್ಲಿ ವರ್ಣಶಿಲ್ಪಿ ವೆಂಕಟಪ್ಪ ಕಲಾಶಾಲೆ ಇದೆ. ಕಲಾಶಾಲೆ ಎದುರಿನ ಬಸ್‌ನಿಲ್ದಾಣದ ಪಕ್ಕ ಗ್ಯಾಲರಿಯ ನಾಮಫಲಕ ಹಾಕಲಾಗಿದೆ. ಆದರೆ ಈಗ ಫಲಕದಲ್ಲಿರುವ ಕೆಲ ಅಕ್ಷರಗಳು ನಾಪತ್ತೆಯಾಗಿವೆ.
ಬಸ್‌ಗಾಗಿ ಕಾಯುವ ಪ್ರಯಾಣಿಕರೊ ಪಾದಚಾರಿಗಳೋ ಅದನ್ನು ಕಿತ್ತು ಹಾಕಿರಬಹುದು. ಅದಿಲ್ಲದಿದ್ದರೆ ಮಳೆ, ಬಿಸಿಲಿಗೆ ಸಿಕ್ಕಿ ನಾಮಫಲಕದ ಅಕ್ಷರಗಳು ಕಿತ್ತುಹೋಗಿರಬಹುದು.
ಆದರೂ ಸಂಬಂಧಪಟ್ಟವರು ಇದರತ್ತ ಗಮನಹರಿಸಿಲ್ಲ. ಇನ್ನಾದರೂ ನಾಮಫಲಕ ಅಕ್ಷರಗಳನ್ನು ಸರಿಪಡಿಸುವರೇ? ಕಾದು ನೋಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.