ADVERTISEMENT

ನಾಳೆ ಬೇರೆ ಕಡೆಯೂ ಇದೇ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 19:30 IST
Last Updated 7 ಜೂನ್ 2011, 19:30 IST

ತುಮಕೂರು ಜಿಲ್ಲೆಯಲ್ಲಿ ಕನ್ನಡ ಮಾಧ್ಯಮದ 153 ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿರುವುದು (ಪ್ರ.ವಾ. ಜೂ.1) ತುಂಬ ಕಳವಳಕಾರಿಯಾಗಿದೆ! ಖಾಸಗಿ ಶಾಲೆಗಳನ್ನು ಬೇಕಾಬಿಟ್ಟಿ ಬೆಳೆಯಲು ಬಿಟ್ಟಿದ್ದರ ಪರಿಣಾಮವಿದು. ಇಂಗ್ಲಿಷ್ ಮಾಧ್ಯಮದಲ್ಲಿ ನಮ್ಮ ಮಗು ಓದಿದರೆ ಮುಂದೆ ಡಾಕ್ಟರೋ, ಎಂಜಿನಿಯರೋ ಆಗಿ ಕೈತುಂಬ ಹಣ ಗಳಿಸಬಹುದೆಂಬ ಪಾಲಕರ ಭಾವನೆಯನ್ನು ಅರ್ಥಮಾಡಿಕೊಂಡ ಖಾಸಗಿ ವ್ಯಾಪಾರಸ್ಥರು ಇಂಗ್ಲಿಷ್ ಮಾಧ್ಯಮದ ಶಾಲೆ ತೆರೆದು ದುಪ್ಪಟ್ಟು ಹಣ ಬಾಚುತ್ತಿದ್ದಾರೆ. ಸರ್ಕಾರವೂ ಕುಂಭಕರ್ಣ ನಿದ್ದೆಯಲ್ಲಿ ತೊಡಗಿದೆ. ಹೀಗಾಗಿ ಇಂದು ತುಮಕೂರು ಜಿಲ್ಲೆ-ನಾಳೆ ಇಡೀ ರಾಜ್ಯದ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ದೂರವಿಲ್ಲ. ಇದು ಕನ್ನಡದ ಕರ್ಮ ಕಥೆ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.