ADVERTISEMENT

ಪಡಿತರ ವಂಚಿತ ಬಡವರು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 19:30 IST
Last Updated 22 ಮಾರ್ಚ್ 2012, 19:30 IST

ಪಿರಿಯಾಪಟ್ಟಣ, ಹುಣಸೂರು, ಎಚ್. ಡಿ. ಕೋಟೆ ತಾಲ್ಲೂಕುಗಳ ಮದ್ಯದಂಗಡಿಗಳ ಅಲ್ಲಿನ ಬಡವರು ರೇಷನ್ ಕಾರ್ಡ್‌ಗಳನ್ನು  ಅಡ ಇಟ್ಟಿರುವುದು ಬೆಳಕಿಗೆ ಬಂದಿದೆ. ಪಡಿತರ ಚೀಟಿ ಅಡ ಇಟ್ಟು `ಕುಡಿಯುವ~ ಅನಿವಾರ್ಯತೆ ನಿಜಕ್ಕೂ ದುರದೃಷ್ಟಕರ.

ಪಡಿತರ ಚೀಟಿ ಅಡ ಇಟ್ಟಿದ್ದರಿಂದ ಅನೇಕರಿಗೆ ಆಹಾರ ಧಾನ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಅವರ ಮಕ್ಕಳು ಹಾಗು ಕುಟುಂಬ ಸದಸ್ಯರು ಹಸಿವು ಹಾಗೂ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಾರೆ.

ಸರ್ಕಾರ ಕೊಟ್ಟ ರೇಷನ್ ಕಾರ್ಡ್‌ಗಳನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ತಡೆಯುವುದು ಹೇಗೆ? ಮದ್ಯದ ಅಂಗಡಿಯವರು ಈ ಪಡಿತರ ಕಾರ್ಡುಗಳನ್ನು ಬಳಸಿಕೊಂಡು ಆಹಾರ ಧಾನ್ಯ ಖರೀದಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಮದ್ಯದ ಅಂಗಡಿಗಳ ಮೇಲೆ ನಿಗಾ ಇಡಬೇಕು. ಪಡಿತರದಾರಿಗೆ ನೀಡಿದ ಆಹಾರ ಧಾನ್ಯ ಬೇರೆಯವರ ಪಾಲಾಗುವುದಕ್ಕೆ ಅವಕಾಶ ಕೊಡಬಾರದು.

ಪಡಿತರ ಕಾರ್ಡು ಅಡ ಇಟ್ಟು ಕುಡಿಯುವವರು ಬಹುತೇಕ ಗಂಡಸರು. ಸರ್ಕಾರ ಪಡಿತರ ಚೀಟಿಗಳನ್ನು ಕುಟುಂಬದ ಹಿರಿಯ ಮಹಿಳೆಯ ಹೆಸರಿಗೆ ವರ್ಗಾಯಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು.       
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT