ADVERTISEMENT

ಪರದೆಗೆ ಬರ!

​ಸಿ.ಪಿ.ಕೆ.ಮೈಸೂರು
Published 12 ಸೆಪ್ಟೆಂಬರ್ 2013, 19:59 IST
Last Updated 12 ಸೆಪ್ಟೆಂಬರ್ 2013, 19:59 IST

‘ದೇವಮಾನವನಿಗೆ ಸೊಳ್ಳೆಗಳ ಕಾಟ’  (ಪ್ರ.ವಾ. ಸೆ. 5) ಒಳ್ಳೆಯ ಸುದ್ದಿಯೇ ಸರಿ. ದೇವತಾ ವಿಗ್ರಹದ ಮೇಲೆ ಇಲಿಗಳು ಓಡಾ ಡುವುದನ್ನು ಕಂಡು, ಮಹರ್ಷಿ ದಯಾನಂದ ಸರಸ್ವತಿ, ದೇವರಲ್ಲಿ ನಂಬಿಕೆ ಕಳೆದುಕೊಂಡ ರಂತೆ!

ಅದೇನೇ ಇರಲಿ, ‘ದೇವ ಮಾನವ’ರು ಒಬ್ಬೊಬ್ಬರಾಗಿ ‘ದೆವ್ವ ಮಾನವ’ರಾಗುತ್ತಿರುವುದು ಈಗ ಭಾರತದ ‘ದೈತ್ಯ’ ವಿದ್ಯಮಾನ! ದೇವ, ದೈವ, ದೆವ್ವ – ಎಲ್ಲ ಒಂದೇ ಮೂಲದ ಶಬ್ದಗಳು. (ನದೀ ಮೂಲ, ಋಷಿ ಮೂಲ ಗಳನ್ನು ಹೇಗೊ ಹಾಗೆ ‘ದೇವಮಾನವ’ ಮೂಲವನ್ನೂ ನೋಡಬಾರದು) ಅಂದ ಹಾಗೆ, ಸೊಳ್ಳೆಪರದೆಗೆ ಕಾರಾಗೃಹದಲ್ಲಿ ಬರವೆ? ಪರಮಾತ್ಮನಿಗೆ ‘ಪರ’ದೆಯ ಕೊರತೆಯೇಕೆ? ಛೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.