ADVERTISEMENT

ಪ್ರಶಸ್ತಿ ಪ್ರದಾನ: ಬನವಾಸಿಯೇ ಸಮಂಜಸ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ಕನ್ನಡದ ಆದಿ ಕವಿ ಪಂಪನ ನೆಚ್ಚಿನ, ಮೆಚ್ಚಿನ ಆಡುಂಬೊಲ ಬನವಾಸಿ. ಇಲ್ಲಿ ಕನ್ನಡ ಸಾಹಿತ್ಯದ ಮೇರು ಪ್ರಶಸ್ತಿಯಾದ  ‘ಪಂಪ ಪ್ರಶಸ್ತಿ’ಯನ್ನು ಪ್ರತಿ ವರ್ಷ ನಡೆಯುವ ಕದಂಬೋತ್ಸವದಲ್ಲಿ ಪ್ರದಾನ ಮಾಡುತ್ತಾ ಬಂದಿರುವುದು ಇಡೀ ನಾಡಿಗೆ ಹೆಮ್ಮೆ ತರುವಂಥದ್ದು. ಕಾಲಗರ್ಭದಲ್ಲಿ ಹೂತು ಹೋಗಿದ್ದ ಬನವಾಸಿಯ ಇತಿಹಾಸವನ್ನು ಹೊರತೆಗೆದು ಪುನರ್ ಸ್ಥಾಪಿಸುವ ಪ್ರಯತ್ನದಲ್ಲಿ ಅನೇಕ ಹಿರಿಯರ ಶ್ರಮವಿದೆ.

ಯಾರದ್ದೋ ಕಟ್ಟುಪಾಡಿಗೆ, ಒತ್ತಡಕ್ಕೆ ಜೋತು ಬಿದ್ದು ಸರ್ಕಾರವು ತೆಗೆದುಕೊಂಡ ನಿರ್ಣಯ ಇದಲ್ಲ. ಪಂಪ ಕಾವ್ಯ ವೈಭವಕ್ಕೆ ಅಕ್ಷರಶಃ ಮೌಲಿಕತೆಯನ್ನು ನೀಡಿ ಪಂಪನ ಹೆಸರನ್ನು ಅಜರಾಮರವಾಗಿಸುವಂತಹ ನಿರ್ಣಯವದು. ಸಾಧಕರು, ಸಂಶೋಧಕರು, ಬುದ್ಧಿ ಜೀವಿಗಳು ಏನೇ ಹೇಳಿದರೂ ‘ಬನವಾಸಿ’ಯ ಮಹತ್ವವನ್ನು ಪಂಪನೇ ಕೊಂಡಾಡಿರುವುದರಿಂದ ಈ ಪ್ರಶಸ್ತಿ ಪ್ರದಾನ ಸಮಾರಂಭದ ಸ್ಥಳವನ್ನು ಅಣ್ಣಿಗೇರಿಗೆ ಸ್ಥಳಾಂತರಿಸಬೇಕೆಂಬ ನಿರ್ಣಯ ವ್ಯರ್ಥ ಪ್ರಲಾಪದ್ದು.

 ಈಗ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಸ್ವೀಕಾರವಾಗಿಸುವ ಮೂಲಕ ಕಾರ್ಯ ಕೈಗೂಡಿಸುವ ಪ್ರಯತ್ನ ನಡೆದಿದೆ. ಇದು ಸರ್ವಥಾ ಯೋಗ್ಯವಾದುದಲ್ಲ. ಕನ್ನಡನಾಡಿನ ಪರಂಪರೆ ಮತ್ತು ಸ್ಫೂರ್ತಿಯ ರಂಗಸ್ಥಳವಾದ ಬನವಾಸಿಯಲ್ಲಿಯೇ ಪ್ರಶಸ್ತಿ ನೀಡುತ್ತಾ ಬಂದಿರುವ ಸರ್ಕಾರದ ಉದ್ದೇಶ ಸರ್ವ ಯೋಗ್ಯವಾದುದಾಗಿದೆ. ಪಂಪನ ಜನ್ಮಸ್ಥಳ ಅಣ್ಣಿಗೇರಿಯಲ್ಲಿ ಪಂಪ ಸ್ಮಾರಕ ನಿರ್ಮಾಣದೊಂದಿಗೆ ಆ ನಾಡಿನ ಸಮಗ್ರ ಅಭಿವೃದ್ಧಿಗೆ ಬೇರೊಂದು ಪ್ರಯತ್ನ ನಡೆಯಲಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.