ADVERTISEMENT

ಬಡಾವಣೆ ಸುಂದರಗೊಳಿಸಿ

ರಾಮಚಂದ್ರರಾವ್
Published 17 ಡಿಸೆಂಬರ್ 2012, 19:59 IST
Last Updated 17 ಡಿಸೆಂಬರ್ 2012, 19:59 IST

ನಂದಿನಿ ಬಡಾವಣೆಯಲ್ಲಿ 10 ವರ್ಷಗಳಿಂದ ಬೇಕಾದಷ್ಟು ಸಸಿಗಳನ್ನು ಬೆಳೆಸಿದ್ದೇನೆ. ಆದರೆ ಸಸಿಗಳ ಮೇಲ್ವಿಚಾರಣೆ ತೃಪ್ತಿಕರವಾಗಿಲ್ಲ. ಉದ್ಯಾನವನಗಳ ಕಬ್ಬಿಣದ ಗೇಟ್‌ಗಳು ಹಾಗೂ ಟ್ರಿಗಾರ್ಡ್ಸ್ ಕಳ್ಳತನವಾಗುತ್ತಿವೆ. ಬೇಕಾದಷ್ಟು ಕಡೆ ಶಾಲೆಯ ಮುಂಭಾಗದಲ್ಲಿರುವ ಹೊಂಗೆ ಮರದ ಉದ್ಯಾನವನ 5-6 ಕಡೆ ಬೇಲಿ ಕಿತ್ತುಹೋಗಿದೆ. ಈ ಕೂಡಲೇ ದುರಸ್ತಿ ಮಾಡಿ ಬೇಲಿಯ ಎತ್ತರವನ್ನು ಹೆಚ್ಚಿಸಲು ಕೋರಿದೆ. 2 ಮತ್ತು 3 ಅಡ್ಡ ರಸ್ತೆಯಲ್ಲಿ ಲಾರಿಗಳು ಓಡಾಡಿ ಮೋರಿಗಳು ಕುಸಿದುಬಿದ್ದಿದೆ. ರಾತ್ರಿ ವೇಳೆ ವಾಹನ ಸವಾರರಿಗೆ ಬಹಳ ತೊಂದರೆಯಾಗುತ್ತಿದೆ.

ಉದ್ಯಾನವನಗಳ ಸುತ್ತಲೂ ಹಾಗೂ ಬಡಾವಣೆಯಲ್ಲಿ ರಾಶಿಗಟ್ಟಲೇ ಕಸ ಸಂಗ್ರಹವಾಗುತ್ತದೆ. ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಿ ಸಂಪೂರ್ಣವಾಗಿ ಕಸರಹಿತ ಬಡಾವಣೆ ಮಾಡಬೇಕಾಗಿ ಕೋರಿದೆ. ಬಿಹೆಚ್‌ಇಎಲ್ ಉದ್ಯಾನವನದಲ್ಲಿ ಸೂರ್ಯಾಸ್ತ ಗೋಪುರ ನಿರ್ಮಾಣ ಮಾಡಲು ಕೋರಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.