ADVERTISEMENT

ಬೆಲೆ ಏರಿಕೆಗೆ ಕಡಿವಾಣ ಅಗತ್ಯ

ಕಾವೇರಿ ಎಸ್.ಎಸ್, ಹಾಸನ.
Published 8 ಜುಲೈ 2014, 19:30 IST
Last Updated 8 ಜುಲೈ 2014, 19:30 IST

ಮುಂಗಾರಿನ ಪ್ರಮಾಣ ಕಡಿಮೆ ಇದ್ದರೂ ರೈತರು ಭರವಸೆ ಕಳೆದುಕೊಳ್ಳುವುದು ಬೇಡ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಮಳೆಯ ಕೊರತೆಯೊಂದೇ ಪ್ರಮುಖ ಸಮಸ್ಯೆ­ಯಾಗಿದ್ದರೆ ಚಿಂತಿಸುವ ಅಗತ್ಯವಿರ­ಲಿಲ್ಲ. ಮಳೆ ಪ್ರಮಾಣ ಕಡಿಮೆ­ಯಾಗುವುದರೊಂದಿಗೆ ದಿನನಿತ್ಯದ ವಸ್ತುಗಳೂ ತುಟ್ಟಿಯಾಗುತ್ತಿರುವುದರಿಂದ ಜನಸಾಮಾನ್ಯರ ಆತಂಕಕ್ಕೆ ಕಾರಣವಾಗಿದೆ.

ಪೆಟ್ರೋಲ್, ಎಲ್‌ಪಿಜಿ,  ರೈಲು ಪ್ರಯಾಣ ದರಗಳನ್ನು ಏರಿಕೆ ಮಾಡಿರುವುದು ಬಡ ಮತ್ತು ಮಧ್ಯಮ ವರ್ಗದವರಿಗೆ ಬಿಜೆಪಿ ಸರ್ಕಾರ ನೀಡುತ್ತಿರುವ ಕೊಡುಗೆಯೇ? ಕಾಂಗ್ರೆಸ್ ಸರ್ಕಾರವೂ ದರ ಏರಿಕೆಯನ್ನು ಇದೇ ರೀತಿ ಸಮರ್ಥಿಸಿಕೊಂಡಿತ್ತು. ಆಗ ವಿಪಕ್ಷ ಬಿಜೆಪಿ ದರ ಏರಿಕೆಯನ್ನು ವಿರೋಧಿಸಿತ್ತು. ಆದರೆ ಹಿಂದಿನ ಸರ್ಕಾರದ ಹಾದಿಯಲ್ಲೇ ಪ್ರಧಾನಿ ನರೇಂದ್ರ ಮೋದಿಯೂ ಸಾಗುತ್ತಿರುವುದು ಜನಸಾಮಾನ್ಯರು ಪ್ರಸ್ತುತ ಸರ್ಕಾರದ ಆಡಳಿತ ವೈಖರಿ ವಿಮರ್ಶಿಸುವಂತೆ ಮಾಡಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.